Home Local ಶನಿವಾರ ಯಕ್ಷಗಾನ ಪ್ರದರ್ಶನ.

ಶನಿವಾರ ಯಕ್ಷಗಾನ ಪ್ರದರ್ಶನ.

SHARE

ಯಲ್ಲಾಪುರ: ಯಲ್ಲಾಪುರದ ಯಕ್ಷಾಭಿಮಾನಿ ಬಳಗ ಹಾಗೂ ಸುಬ್ಬಣ್ಣ ಕಂಚಗಲ್
ಇವರ ಸಂಯುಕ್ತ ಆಶ್ರಯದಲ್ಲಿ  ಯಲ್ಲಾಪುರದ ಕಲಾವಿದರ ಸಹಕಾರದೊಂದಿಗೆ ಇದೆ ಬರುವ ಶನಿವಾರ ಸಂಜೆ 6-00 ಗಂಟೆಯಿಂದ ಯಲ್ಲಾಪುರ ದ ಹುಲ್ಲೊರಮನೆ ದೇವಸ್ಥಾನದ ಸಭಾ ಮಂಟಪದಲ್ಲಿ ಶ್ರೀ ಶನಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಹಿಮ್ಮೇಳ ದಲ್ಲಿ  ಅನಂತ ಹೆಗಡೆ , ದಿನೇಶ್ ಭಟ್ ಕವಾಳೆ, ಪ್ರಮೊದ ಭಟ್ ಹಾಗೂ ಮುಮ್ಮೇಳದಲ್ಲಿ ಭಾಸ್ಕರ ಗಾಂವ್ಕರ್, ತಮ್ಮಣ್ಣ ಗಾಂವ್ಕರ್, ನರಸಿಂಹ ಗಾಂವ್ಕರ್, ಸದಾಶಿವ ಭಟ್, ನಾಗರಾಜ ಕುಂಕಿಪಾಲ ಮುಂತಾದವರಿದ್ದಾರೆ. ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯ ಯಕ್ಷ ಅಭಿಮಾನಿಗಳು ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.

(ಸಾಂದರ್ಭಿಕ ಚಿತ್ರ ಬಳಸಿದೆ.)