Home Local ಮಾ.17 ರಂದು ಹೊನ್ನಾವರದ ಹವ್ಯಕದಲ್ಲಿ ಮಲೆನಾಡು ಗಿಡ್ಡ ಹಬ್ಬ : ಸಂಯೋಜನೆಗೊಂಡಿದೆ ವೈವಿದ್ಯಮಯ...

ಮಾ.17 ರಂದು ಹೊನ್ನಾವರದ ಹವ್ಯಕದಲ್ಲಿ ಮಲೆನಾಡು ಗಿಡ್ಡ ಹಬ್ಬ : ಸಂಯೋಜನೆಗೊಂಡಿದೆ ವೈವಿದ್ಯಮಯ ಕಾರ್ಯಕ್ರಮ.

SHARE

ಹೊನ್ನಾವರ :  ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ ಮತ್ತು ರೋಟರಿ ಕ್ಲಬ್‌ ಆಶ್ರಯದಲ್ಲಿ ಮಾ.17 ರಂದು ತಾಲೂಕಿನ ಕರ್ಕಿನಾಕಾದ ಹವ್ಯಕ ಸಭಾಭವನದಲ್ಲಿ ಮಲೆನಾಡು ಗಿಡ್ಡ ಹಬ್ಬ ನಡೆಯಲಿದೆ ಎಂದು ಭಾರತೀಯ ಗೋ ಪರಿವಾರದ ಕಾರ್ಯದರ್ಶಿ ಡಾ.ವಿಶ್ವೇಶ್ವರ ಭಟ್‌ ತಿಳಿಸಿದರು.

   ಕರ್ಕಿನಾಕಾದ ಹವ್ಯಕ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೆನಾಡು ಗಿಡ್ಡ ಗೋ ತಳಿಯ ಸಂರಕ್ಷ ಣೆ ಮತ್ತು ಸಂವರ್ಧನೆ ಉದ್ದೇಶದಿಂದ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ತಿಳಿಸಿದರು.

     ಎನ್‌ಡಿಆರ್‌ಐ ವಿಜ್ಞಾನಿಗಳಿಂದ ವಿಚಾರ ಸಂಕಿರಣ, ಮಲೆನಾಡು ಗಿಡ್ಡ ತಳಿಯ ಗೋವುಗಳ ಪ್ರದರ್ಶನ, ಅವುಗಳ ಹಾಲಿನಿಂದ ತಯಾರಿಸುವ ಆಹಾರೋತ್ಸವ, ಗೋ ಸಂರಕ್ಷ ಣೆ ಕ್ಷೇತ್ರದಲ್ಲಿ ಸನ್ಮಾನ, ಚಿಂತನ- ಮಂಥನ, ಗೋವುಗಳ ಉಚಿತ ಆರೋಗ್ಯ ಶಿಬಿರ, ಹೈನು ಉತ್ಪನ್ನಗಳ ಪ್ರದರ್ಶನ, ಮಾರಾಟ ಮುಂತಾದವು ನಡೆಯಲಿವೆ. ಕಾಯಕ್ರಮಕ್ಕೆ ಬರುವ ಎಲ್ಲರಿಗೂ ಮಲೆನಾಡು ಗಿಡ್ಡ ಗೋವಿನ 30 ಎಂಎಲ್‌ ಹಾಲನ್ನು ಉಚಿತವಾಗಿ ಕೊಡಲಾಗುವುದು ಎಂದರು.

  ಕುಮಟಾ ಹವ್ಯಕ ಮಂಡಲದ ಅಧ್ಯಕ್ಷ ಸುವರ್ಣಗದ್ದೆ ಮಂಜುನಾಥ ಭಟ್‌ ಮಾತನಾಡಿ ಮಲೆನಾಡು ಗಿಡ್ಡ ತಳಿಯ ಹಸುಗಳ ಹಾಲು, ಹಾಲಿನ ಉತ್ಪನ್ನಗಳು, ಗೋಮೂತ್ರ, ಗೋಮಯ ಸರ್ವಶ್ರೇಷ್ಠವಾಗಿದೆ. 
ಹೊರ ರಾಜ್ಯಗಳಿಂದ ಮಲೆನಾಡು ಗಿಡ್ಡ ಗೋವುಗಳನ್ನು ಹುಡುಕಿಕೊಂಡು ಖರೀದಿಗೆ ಬರುತ್ತಿದ್ದಾರೆ ಎಂದರು.

ಈ ತಳಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಕಂಡುಬರುತ್ತದೆ ಆದರೆ ಹೊನ್ನಾವರ, ಕುಮಟಾ ಮತ್ತು ಭಟ್ಕಳದ ತಾಲೂಕುಗಳಲ್ಲಿ ತಳಿ ಶುದ್ಧತೆಯನ್ನು ಹೊಂದಿದೆ ಎಂದರು.

ತಾಯಿಯ ಎದೆಹಾಲು ಹೊರತುಪಡಿಸಿದರೆ ಮಲೆನಾಡು ಗಿಡ್ಡ ತಳಿಯ ಗೋವಿನ ಹಾಲೇ ಸರ್ವಶ್ರೇಷ್ಠ ಎನ್ನುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳಿಂದ ದೃಢಪಟ್ಟಿದೆ ಎಂದರು.

   ಈ ಸಂದರ್ಭದಲ್ಲಿ ಮಲೆನಾಡು ಗಿಡ್ಡ ತಳಿಯ ವಿವಿಧ ಬಣ್ಣ, ಗುಣಲಕ್ಷ ಗಳ ಆಧಾರದಲ್ಲಿ ಆಯ್ದ ನೂರಕ್ಕೂ ಹೆಚ್ಚು ಗೋವುಗಳ ಪ್ರದರ್ಶನ, ಗವ್ಯೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಆಹಾರೋತ್ಸವ, ಮಲೆನಾಡು ಗಿಡ್ಡ ತಳಿಯ ಬಗ್ಗೆ ವಿಷಯ ತಜ್ಞರಿಂದ ಉಪನ್ಯಾಸ, ವಿಚಾರ ಸಂಕಿರಣಗಳು ನಡೆಯಲಿವೆ ಎಂದರು.

ಶ್ರೀರಾಮಚಂದ್ರಾಪುರ ಮಠ ಮಲೆನಾಡು ಗಿಡ್ಡ ತಳಿಯನ್ನು ಸಂರಕ್ಷ ಣೆಗಾಗಿ ದತ್ತು ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಲೆನಾಡು ಗಿಡ್ಡ ಗೋತಳಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೊನ್ನಾವರ ಹವ್ಯಕ ಮಂಡಲದ ಅಧ್ಯಕ್ಷ ರಾಜು ಹೆಬ್ಬಾರ ತಿಳಿಸಿದರು.

ಉದ್ಘಾಟನಾ ಸಮಾರಂಭ ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು ಎನ್‌ಡಿಆರ್‌ಐ ದಕ್ಷಿಣ ವಿಭಾಗ ಕೇಂದ್ರದ ನಿರ್ದೇಶಕ ಡಾ.ಕೆ.ಪಿ. ರಮೇಶ, ಕರ್ನಾಟಕ ರಾಜ್ಯ ಪಶುಸಂಗೋಪನೆ ಇಲಾಖೆ ನಿರ್ದೇಶಕ ಡಾ.ಎಂ.ಟಿ.ಮಂಜುನಾಥ ಭಾಗವಹಿಸುವರು.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಮಾಹಿತಿ ನೀಡಿದರು.

  ಸುದ್ದಿಗೋಷ್ಠಿಯಲ್ಲಿ ಡಾ. ರವಿ, ಉದಯಶಂಕರ ಭಟ್‌, ಶಶಿಧರ ಹೆಗಡೆ ಗೋವಿಂದ ಹೆಗಡೆ, ಶಂಕರ ಹೆಗಡೆ, ಪಿ.ಎಸ್‌.ಭಟ್‌ ಮತ್ತಿತರರು  ಉಪಸ್ಥಿತರಿದ್ದರು.