Home Article ಗೋವಿಂದ ನಾಯ್ಕ ಎಂಬ ಹಿಂದುಗಳ ಪಾಲಿನ ಆಪದ್ಬಾಂಧವ…ಇವರೇ ನಾಯಕರಾಗಬಾರದೇಕೆ?

ಗೋವಿಂದ ನಾಯ್ಕ ಎಂಬ ಹಿಂದುಗಳ ಪಾಲಿನ ಆಪದ್ಬಾಂಧವ…ಇವರೇ ನಾಯಕರಾಗಬಾರದೇಕೆ?

SHARE

            ಭಟ್ಕಳದ ಗೋವಿಂದ ನಾಯ್ಕರು ಭಟ್ಕಳದ ಯುವ ಜನತೆಗೆ ‘ಗೋವಿಂದಣ್ಣ’ ಎಂದೇ ಚಿರಪರಿಚಿತರು. ಮೊದಲ ಸಲ ನೋಡುವವರಿಗೆ ಸ್ವಲ್ಪ ಗಂಭೀರ ಸ್ವಭಾವದವರಂತೆ ಕಂಡು ಬಂದರೂ ಪರಿಚಯವಾದ ಮೇಲೆ ಅವರ ಸಹೃದಯತೆ ಹಾಗೂ ಸ್ನೇಹಪರತೆಯ ಪರಿಚಯವಾಗದೇ ಇರದು. ನೇರ ನಡೆ-ನುಡಿಯ ದಿಟ್ಟ-ಗಂಭೀರ ವ್ಯಕ್ತಿತ್ವ ಇವರದು. ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳದ ದಿಟ್ಟ ಹೋರಾಟಗಾರರು. ತನಗೆ ಸರಿಕಾಣದ ಸಂಗತಿಯನ್ನು ಯಾರ ಮುಲಾಜಿಗೂ ಒಳಗಾಗದೆ ಖಂಡಿಸಬಲ್ಲ ನಿರ್ದಾಕ್ಷಿಣ್ಯ ನಿಲುವು ; ಎಂಥ ಸಂಕಷ್ಟದ ಸಂದರ್ಭದಲ್ಲೂ ದೃತಿಗೆಡದ ಎದೆಗಾರಿಕೆ ; ಪ್ರಾಣ ಒತ್ತೆಯಿಟ್ಟಾದರೂ ನಂಬಿದವರನ್ನು ಕಾಪಾಡಬಲ್ಲ ಹೃದಯವಂತಿಕೆ ; ಪ್ರಾಮಾಣಿಕತೆ, ಧ್ಯೇಯನಿಷ್ಠೆ,  ಸಮರ್ಪಣಾ ಭಾವ ಮುಂತಾದ ಸದ್ಗುಣಗಳು ಅವರ ಕಷ್ಟಕರವಾದ ಬದುಕು ನೀಡಿದ ಕೊಡುಗೆ ಎನ್ನಬಹುದು.

             ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಬಿ.ಜಿ.ಪಿ. ಯ ಜಿಲ್ಲಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಗೋವಿಂದ ನಾಯ್ಕರು ರಾತ್ರೋ ರಾತ್ರಿ ನಾಯಕರಾಗಿ ಬೆಳೆದು ನಿಂತವರಲ್ಲ ; ತಾವಾಗಿಯೇ ಬಯಸಿ ರಾಜಕಾರಣಿಯಾದವರೂ ಅಲ್ಲ.
ಇದರ ಹಿಂದೆ ಅಪಾರ ತ್ಯಾಗ, ನಿರಂತರ ಪರಿಶ್ರಮವಿದೆ, ಅಪಾರ ಸಾಮಾಜಿಕ ಕಾಳಜಿಯಿದೆ. 1991ರ ಹೊತ್ತಿಗೆ ಭಟ್ಕಳ ನಗರದಲ್ಲಿ  ಬಹು ಸಂಖ್ಯಾತರಾದ ಮುಸಲ್ಮಾನರಿಂದ ಹಿಂದುಗಳ ಮೇಲೆ ನಿರಂತರ ಹಲ್ಲೆ ಪ್ರಾರಂಭವಾಗಿತ್ತು. ಭಟ್ಕಳದ ಜಾಲಿ ಗ್ರಾಮದಲ್ಲಿರುವ ಬೆಂಡೆಕಾನ್ ಎಂಬ ಕುಗ್ರಾಮದಲ್ಲಿನ ತಮ್ಮ ಪುಟ್ಟ ಬೇಕರಿಯೊಂದರಲ್ಲಿ ತಯಾರಾಗುತಿದ್ದ ಬೇಕರಿ ತಿನಿಸುಗಳನ್ನು ಸೈಕಲ್ ಮೇಲೆ ಹೇರಿಕೊಂಡು ಭಟ್ಕಳ ನಗರದ ಮಾರಾಟ ಮಳಿಗೆಗಳಿಗೆ ಹಾಕುವ ಕೆಲಸ ಮಾಡುತ್ತಿದ್ದ ಗೋವಿಂದ ನಾಯ್ಕ, 1992ರಲ್ಲಿ ದ್ವನಿಸುರುಳಿಯಲ್ಲಿ ಉಮಾಭಾರತಿಯವರ ಭಾಷಣ ಕೇಳಿ ಅದರಿಂದ ಆಕರ್ಷಿತರಾಗಿ ಹಿಂದು ಸಂಘಟನೆಯಲ್ಲಿ ತೊಡಗಿಕೊಂಡರು.
            1993 ರಲ್ಲಿ ನಡೆದ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆಯ ರಥೋತ್ಸವದ ಸಂದರ್ಭದಲ್ಲಿ ಮುಸಲ್ಮಾನರು ಕಲ್ಲು ತೂರಾಟ ನಡೆಸಿ ಕೋಮುಗಲಭೆ ಸೃಷ್ಟಿ ಮಾಡಿದರು. ಇಬ್ಬರು ಹಿಂದು ಮೀನುಗಾರರ ಹತ್ಯೆ ನಡೆಯಿತು. ಹನುಮಾನ್ ನಗರದಲ್ಲಿ ಸಮಾರು ಹತ್ತು ಹಿಂದು ಮನೆಗಳಿಗೆ ಬೆಂಕಿ ಹಚ್ಚಾಲಾಯಿತು. ಈ ಸಂದರ್ಭದಲ್ಲಿ ಭಟ್ಕಳಕ್ಕೆ ಭೇಟಿ ನೀಡಿದ ಜಗದೀಶ ಕಾರಂತರ ನೇತೃತ್ವದಲ್ಲಿ ಹಿಂದು ಸಮಾಜದ ರಕ್ಷಣೆಗಾಗಿ ಹಿಂದು ಜಾಗರಣ ವೇದಿಕೆಯ ಭಟ್ಕಳ ಘಟಕ ಪ್ರಾರಂಭವಾಯಿತು. ಇದರಲ್ಲಿ ಅನೇಕ ಉತ್ಸಾಹಿ ಹಿಂದು ತರುಣರು ಸೇರಿಕೊಂಡರು. ಹಿಂದು ಜಾಗರಣ ವೇದಿಕೆಯ ತಾಲೂಕಾ ಸಂಚಾಲಕರಾಗಿ ಕೆ.ಎಚ್.ನಾಯ್ಕ, ಸಹ ಸಂಚಾಲಕರಾಗಿ ಮಾದೇವ ಐ. ಮೊಗೇರ, ಸದಸ್ಯರಾಗಿ ಗೋವಿಂದ ಖಾರ್ವಿ, ರಾಮದಾಸ ಖಾರ್ವಿ, ಸತೀಶ ಕುಮಾರ್, ಎಮ್.ಎಚ್. ನಾಯ್ಕ ಮುಂತಾದವರು ಇದ್ದರು. ಅವರಲ್ಲಿ ಗೋವಿಂದ ನಾಯ್ಕರು ಕೂಡ ಒಬ್ಬರು. 1993 ರ ಜುಲೈ ತಿಂಗಳಲ್ಲಿ ಗೋವಿಂದ ನಾಯ್ಕರ ಮಾವ ಮಾದೇವ ನಾಯ್ಕರ ಹತ್ಯೆಯಾಯಿತು. 1993 ಡಿಸೆಂಬರ್ 6 ರಂದು ಅನಂತ ಕುಮಾರ ಹೆಗಡೆಯವರ ಬಂಧನವಾಯಿತು. ಹಿಂದು ಸಮಾಜ ಸುಮಾರು ಹದಿನೆಂಟು ಜನರನ್ನು ಕಳೆದುಕೊಳ್ಳಬೇಕಾಯಿತು.

            ಹಿಂದು ಸಮಾಜದ ದಯನೀಯ ಸ್ಥಿತಿಯನ್ನು ಕಣ್ಣಾರೆ ಕಂಡ ಗೋವಿಂದ ನಾಯ್ಕರಿಗೆ ಈ ಸಮಾಜಕ್ಕಾಗಿ ಏನಾದರೂ ಮಾಡಬೇಕು, ಬದುಕುವುದಾದರೆ ಈ ಸಮಾಜಕ್ಕಾಗಿಯೇ ಬದುಕಬೇಕೆಂಬ ಆಕಾಂಕ್ಷೆ ಬಲವಾಯಿತು. ಬಂಧನಕ್ಕೊಳಗಾದ ಅನಂತಕುಮಾರ್ ಹೆಗಡೆಯವರನ್ನು ಪೊಲೀಸರಿಂದ ಬಿಡಿಸುವ ಉದ್ಧೇಶದಿಂದ ಉತ್ಸಾಹಿ ತರುಣರು ಕರ್ಫ್ಯೂ ಉಲ್ಲಂಘನೆ ಮಾಡಿ ಸೋನಾರಕೇರಿಯ ನೂತನ ಆಸ್ಪತ್ರೆಯ ಬಳಿ ಸಭೆ ಸೇರಿದರು. ಇದೇ ಸಂದರ್ಭದಲ್ಲಿ ಪೊಲೀಸರಿಂದ ಗೋಲಿಬಾರ್ ನಡೆಯಿತು. ವ್ಯಾಪಾರ ಮಾಡಲು ಹೋಗುತ್ತಿದ್ದ ವಿಷ್ಣು ಭಟ್ಟ, ತಲಗೋಡಿನ ದೇವಯ್ಯ ನಾಯ್ಕ, ರಾಮಚಂದ್ರ ಭಟ್ಟ ಎನ್ನುವವರ ಮೇಲೆ ಪೊಲೀಸರಿಂದ ಗುಂಡಿನ ದಾಳಿಯಾಯಿತು. ಡಾ.ಯು.ಚಿತ್ತರಂಜನ್, ಜಿ.ಪಿ.ನಾಯ್ಕ. ಸುರೇಂದ್ರ ಶಾನಭಾಗ, ಲಕ್ಷ್ಮಣ ನಾಯ್ಕ ಮಣ್ಕುಳಿ, ಎನ್.ಜಿ.ಕೊಲ್ಲೆ, ಮುಂತಾದವರ ಜೊತೆಯಲ್ಲಿ ಗೋವಿಂದ ನಾಯ್ಕರು ಬಂಧನಕ್ಕೆ ಒಳಗಾದರು. ಸುಮಾರು ಮುವತ್ತು ದಿನಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಜೈಲುವಾಸ ಅನುಭವಿಸಿದರು. ಜೈಲಿನಲ್ಲಿ ಗೋವಿಂದ ನಾಯ್ಕ ಎನ್ನುವ ತರುಣನಿಗೆ ಡಾ.ಯು ಚಿತ್ತರಂಜನ್ ರ ಸಾನಿಧ್ಯ ಒದಗಿ ಬಂತು. ಡಾ.ಯು.ಚಿತ್ತರಂಜನ್ ರಿಂದ ಈ ಸಮಾಜಕ್ಕಾಗಿ, ಈ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಪ್ರೇರಣೆ ದೊರೆಯಿತು.

              1994 ರಲ್ಲಿ ಮತ್ತೊಂದು ಮಹತ್ವಪೂರ್ಣ ಘಟನೆ ಘಟಿಸಿತು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ಬರುವಂತೆ ಪ್ರಾಂತ ಹಿಂದು ಜಾಗರಣ ವೇದಿಕೆಯಿಂದ ಕರೆ ಬಂತು. ಆಗ ಭಟ್ಕಳದಿಂದ ಅನಂತಕುಮಾರ ಹೆಗಡೆಯವರ ನೇತೃತ್ವದಲ್ಲಿ ಹೊರಡಲು ಹೆಸರು ನೋಂದಾಯಿಸಿಕೊಂಡವರು ಎಪ್ಪತ್ತು ಜನ,ಆದರೆ ಹೊರಟವರು ಕೇವಲ ಏಳು ಜನ ಮಾತ್ರ. ದೀಪಕ ಶಾನಭಾಗ, ಕಿರಣ ಶಾನಭಾಗ, ಸತೀಶ ಶೆಟ್ಟಿ, ಪ್ರಸನ್ನ ಪೂಜಾರಿ, ಗೋವಿಂದ ನಾಯ್ಕರ ಜೊತೆಯಲ್ಲಿ ಹನುಮಾನ ನಗರದಿಂದ ಇಬ್ಬರು- ಹೀಗೆ ಒಟ್ಟು ಏಳು ಮಂದಿ. ಈ ಧ್ವಜಾರೋಹಣಕ್ಕೆ ಸಿದ್ಧವಾದದ್ದು ದಕ್ಷಿಣಕನ್ನಡದ ಸತ್ಯಜಿತ್ ಸುರತ್ಕಲ್ ನೇತೃತ್ವದ ಒಂದು ತಂಡ ; ಉತ್ತರಕನ್ನಡದ ಅನಂತಕುಮಾರ ಹೆಗಡೆಯವರ ನೇತೃತ್ವದ ಇನ್ನೊಂದು ತಂಡ. ಈ ತರುಣರ ಶೌರ್ಯದ ಫಲವಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣವಾಯಿತು. ಈ ಘಟನೆಯಲ್ಲಿ ಅನಂತಕುಮಾರ ಹೆಗಡೆಯವರು ಪೊಲೀಸರ ಏಟಿನಿಂದ ಗಾಯಗೊಂಡು ಆಸ್ಪತ್ರೆಗೆ ಸೇರಿದರು. ಆದರೆ ದುರ್ದೈವವಶಾತ್ ಭಟ್ಕಳದ ತರುಣರು ಧಾರವಾಡದ ದೇಶಪಾಂಡೆ ನಗರದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದುದರಿಂದ ನೇರವಾಗಿ ಧ್ವಜಾರೋಹಣದಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿತು

             ಕೆ.ಎಚ್.ನಾಯ್ಕರ ನಂತರ ಭಟ್ಕಳದ ಹಿಂದು ಜಾಗರಣ ವೇದಿಕೆಯ ತಾಲೂಕ ಸಂಚಾಲಕರಾಗಿ ಗೋವಿಂದ ನಾಯ್ಕರು ನಿಯುಕ್ತರಾದರು. ಭಟ್ಕಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗೋಹತ್ಯೆಯನ್ನು ಅತ್ಯಂತ ದಿಟ್ಟತನದಿಂದ ಖಂಡಿಸುವ ಪ್ರಯತ್ನ ನಡೆಯಿತು. ಭಟ್ಕಳದ ನೂರಾರು ನಿಸ್ವಾರ್ಥಿ ಹಿಂದು ತರುಣರು ಗೋವಿಂದ ನಾಯ್ಕರಿಗೆ ಜೊತೆಯಾದರು. ತತ್ಫಲವಾಗಿ ಭಟ್ಕಳದ ಹಿಂದು ಸಮಾಜ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲ ವಿಶ್ವಾಸ ಪಡೆಯಿತು. ಭಟ್ಕಳದ ಗೋವಿಂದ ನಾಯ್ಕರು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾಗಿಯೂ ಜವಾಬ್ದಾರಿ ನಿರ್ವಹಿಸಿದರು. ಪ್ರಸ್ತುತ ಸಂಘದ ಆಣತಿಯಂತೆ ಉಕ ಜಿಲ್ಲೆಯ ಬಿಜೆಪಿ ಜಿಲ್ಲಾ ಉಪಾದ್ಯಕ್ಷರಾಗಿದ್ದಾರೆ.ಬರೆದರು ಮುಗಿಯದಷ್ಟು ಸಾಹಸದ ಕತೆ ಇದು…ಮೊಗೆದಷ್ಟು ಹೋರಾಟದ ಕತೆಗಳೆ ಸಿಗುತ್ತದೆ ..

ಕೃಪೆ : Face Book.