Home Local ಗುಡೇಅಂಗಡಿಯಲ್ಲಿ ಜಲವಳ್ಳಿ-ಹುಡಗೋಡ ಅವರ ಅಗಲಿಕೆಗೆ ನುಡಿನಮನ

ಗುಡೇಅಂಗಡಿಯಲ್ಲಿ ಜಲವಳ್ಳಿ-ಹುಡಗೋಡ ಅವರ ಅಗಲಿಕೆಗೆ ನುಡಿನಮನ

SHARE


ಕುಮಟಾ: ತಾಲೂಕಿನ ಗುಡೇಅಂಗಡಿ ಮಾದರಿ ರಸ್ತೆಯ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಶ್ರೀ ಮಕರಜ್ಯೋತಿ ಯಕ್ಷಗಾನ ಮಂಡಳಿ ಇತ್ತೀಚಗೆ ನಿಧನರಾದ ಹೆಸರಾಂತ ಯಕ್ಷಗಾನ ಕಲಾವಿದರಾದ ಜಲವಳ್ಳಿ ವೆಂಕಟೇಶ್ ರಾವ್ ಹಾಗೂ ಹುಡಗೋಡ ಚಂದ್ರಹಾಸ ನಾಯ್ಕ ಅವರ ಗೌರವಾರ್ಥ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಮಂಡಳಿಯ ಸಂಚಾಲಕ ರವಿ ನಾಯ್ಕ ಅವರು ಮಾತನಾಡಿ ಜಲವಳ್ಳಿ ವೆಂಕಟೇಶ ರಾವ್ ಮತ್ತು ಹುಡಗೋಡ ಚಂದ್ರಹಾಸ ನಾಯ್ಕ ಅವರು ಮಕರಜ್ಯೋತಿ ಯಕ್ಷಗಾನ ಮಂಡಳಿಯೊಟ್ಟಿಗೆ ಮೊದಲಿನಿಂದಲೂ ಇದ್ದು ಮಾರ್ಗದರ್ಶನ ಮಾಡುತ್ತಿದ್ದರು. ಅವರಿಬ್ಬರ ವಾತ್ಸಲ್ಯಪೂರ್ಣ ಸಲಹೆ ಸೂಚನೆಗಳು ನಮ್ಮಗೆ ಭೀಮಬಲ ಬಂದಂಆಗುತ್ತಿತ್ತು, ತಮಗೆ ಯಕ್ಷಗಾನ ಕಲೆ ತಂದೆಯಿಂದ ರಕ್ತಗತವಾಗಿ ಬಂದಿದ್ದರೂ ರಂಗದಲ್ಲಿಯ ನಡೆಯನ್ನು ಕಲಿಸಿಕೊಟ್ಟವರು ಜಲವಳ್ಳಿ ವೆಂಕಟೇಶ್ ರಾವ್ ಅವರು ಎಂದು ಬಾವುಕರಾದರು.


ತಾ.ಪಂ. ಸದಸ್ಯ ಜಗನ್ನಾಥ ನಾಯ್ಕ ಮಾತನಾಡಿ ವಿಕ್ರಮನನ್ನು ಕಾಡುವ ಶನೀಶ್ವರನ ಪಾತ್ರದಲ್ಲಿ ಜಲವಳ್ಳಿಯವರ ವೇಷ ಮತ್ತು ವ್ಯಾಘ್ರ ಘರ್ಜನೆಯ ಚಂದ್ರಹಾಸ ಹುಡಗೋಡ ಅವರ ಪ್ರತಿ ನಾಯಕನ ಪಾತ್ರ ಶಾಸ್ವತವಾಗಿ ಕಲಾಭಿಮಾನಿಗಳ ಎದೆಯಲ್ಲಿ ನಿಲ್ಲುತ್ತದೆ. ಅಂಥ ಕಲಾವಿದರು ಕಳೆದುಕೊಂಡ ಯಕ್ಷಗಾನ ಕ್ಷೇತ್ರಕ್ಕೆ ತುಂಬ ನಷ್ಟವಾಗಿದೆ ಎಂದರು.


ಈ ಸಂದರ್ಭದಲ್ಲಿ ಶಿಕ್ಷಕ ಚಿದಾನಂದ ಭಂಡಾರಿ, ನ್ಯಾಯವಾದಿ ಮಮತಾ ನಾಯ್ಕ, ಹವ್ಯಾಸಿ ಕಲಾವಿದರಾದ ಬಿ.ಎಸ್.ಗೌಡ, ಬಂಗಾರಿ ಮಾಸ್ತರರು, ಪ್ರಶಾಂತ ನಾಯ್ಕ ಬಾಸಳ್ಳಿ, ಆರ್.ಎನ್.ಹೆಗಡೆ ಹೊಲನಗದ್ದೆ, ಸುರೇಶ ಭಂಡಾರಿ ಕಾಗಾಲ ಮಂತಾದವರು ಅಗಲಿದ ಕಲಾವಿದರನ್ನು ಸ್ಮರಿಸಿಕೊಂಡರು.
ಜಿ.ಎಲ್.ನಾಯ್ಕ ಕೂಜಳ್ಳಿ ಮತ್ತು ಸೀತಾರಾಮ ಆಚಾರಿ ಕಾಗಾಲ ಅವರು ಮೃದಂಗ ಸಾತ್‍ನೊಂದಿಗೆ ಯಕ್ಷಗಾನ ಪದದೊಂದಿಗೆ ನಮನ ಸಲ್ಲಿಸಿದರು.


ಮಾರುತಿ ನಾಯ್ಕ ಕಾಗಾಲ, ಮಂಜು ಮಾಸ್ತರರು, ಗೋಪಾಲ ನಾಯ್ಕ ಬಾಡ, ಲಕ್ಷ್ಮಣ ನಾಯ್ಕ ಹೊಲನಗದ್ದೆ, ಮಂಡಳಿಯ ಸದಸ್ಯರಾದ ರಾಘವೇಂದ್ರ ನಾಯ್ಕ, ಹೊನ್ನಪ್ಪ ನಾಯ್ಕ, ಮಂಜು ಪಟಗಾರ, ಸೂರ್ಯ ನಾಯ್ಕ, ಕಾವ್ಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.