Home Local ಕಾರ್ಡ ಮಾಡಿಸಲು ಬಂದಾತ ಯಮನ ಪಾದ ಸೇರಿದ: ಆಯುಷ್ಮಾನ್ ಕಾರ್ಡ ಗೆ ಬಂದವನ ಆಯಸ್ಸು ಮುಗೀತು.

ಕಾರ್ಡ ಮಾಡಿಸಲು ಬಂದಾತ ಯಮನ ಪಾದ ಸೇರಿದ: ಆಯುಷ್ಮಾನ್ ಕಾರ್ಡ ಗೆ ಬಂದವನ ಆಯಸ್ಸು ಮುಗೀತು.

SHARE

ಕಾರವಾರ: ಆಯುಷ್ಮಾನ ಆರೋಗ್ಯ ಕಾರ್ಡ್ ಪಡೆಯಲು ಸಾಲಿನಲ್ಲಿ ನಿಂತಿದ್ದ ವೃದ್ಧರೊಬ್ಬರು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವಿಗೀಡಾದ ‌ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದೆ.

ಕಾರವಾರ ತಾಲೂಕಿನ ಮುದಗದ ತುಕಾರಾಮ ಸುಕ್ರು ತಾಂಡೇಲ್ 64 ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ವ್ಯಕ್ತಿಯಾಗಿದ್ದು ಇಂದು ಮುಂಜಾನೆಯಿಂದ ಆಯುಷ್ಮಾನ್ ಹಾಗು ಆರೋಗ್ಯ ಕರ್ನಾಟಕ ಕಾರ್ಡ್ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಆದರೇ ನಿತ್ರಾಣಗೊಂಡು ಕುಸಿದು ಬಿದ್ದಿದ್ದಲ್ಲದೇ ಹೃದಯಾಘಾತವಾಗಿ ಸ್ಥಳದಲ್ಲೇ ಸಾವು ಕಂಡಿದ್ದಾನೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಸಮಸ್ಯೆ ಬಗ್ಗೆ ಮಾತನಾಡಿ ಇದು ಇಂದು ನಿನ್ನೆಯ ಗೋಳಲ್ಲ ವಾರದಲ್ಲಿ ಮೂರು ದಿನ ಇದೇ
ದೂರದೂರಿಂದ ಬಂದು ದಿನಗಟ್ಟಲೇ ವಯೋ ವೃದ್ಧರಾದಿಯಾಗಿ ಕಾರ್ಡ ಮಾಡಿಸಲು ಕಾಯಬೇಕಿದೆ ಎಂದು ಜನರು ತಮ್ಮ ಅಳಲು ತೋಡಿಕೊಂಡರು.

ಘಟನೆ ಸಂಬಂಧ ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.