Home Information ಮಾರ್ಚ 24 ರಂದು ಶ್ರೀನಿಧಿ ಸೇವಾವಾಹಿನಿ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ.

ಮಾರ್ಚ 24 ರಂದು ಶ್ರೀನಿಧಿ ಸೇವಾವಾಹಿನಿ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ.

SHARE

ಹೊನ್ನಾವರ: ತಾಲೂಕಿನ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಗಾಣಿಗ ಸಮುದಾಯದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾರ್ಚ 24 ರಂದು ಮಧ್ಯಾಹ್ನ 3 ಗಂಟೆಗೆ ಬಾಳೆಗದ್ದೆಯ ಶ್ರೀ ವೆಂಕ್ರಟಮಣ ದೇವಾಲಯದ ಸಭಾಭವನದಲ್ಲಿ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಳ್ಳಲಾಗಿದೆ. 2017-18ನೇ ಸಾಲಿನ ಎಸ್.ಎಸ್.ಎಲ್.ಸಿ 85% ಪಿ.ಯು.ಸಿಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು.

ಅರ್ಹ ವಿದ್ಯಾರ್ಥಿಗಳು ದೃಡಿಕೃತ ಅಂಕಪಟ್ಟಿಯ ಜೊತೆ ಸ್ವ ಲಿಖಿತ ಅರ್ಜಿಯನ್ನು ಮಾರ್ಚ 23ರೊಳಗೆ ಸಂಘದ ಅಧ್ಯಕ್ಷರಿಗೆ ಸಲ್ಲಿಸುವಂತೆ ಕೋರಲಾಗಿದೆ. ಇದೇ ದಿನ ಸಮಾಜದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ಗೋಪಾಲ ಶೆಟ್ಟಿ ಪ್ರಕಟಣಿಯಲ್ಲಿ ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಗೋಪಾಲ ಶೆಟ್ಟಿ 9483667600 ರವಿ ಶೆಟ್ಟಿ 9379409477