Home Local ಮಿರ್ಜಾನಿನ ಸಮೀಪ ಬೈಕ್ ಅಪಘಾತ : ಸವಾರನ ಕೈ ಕಾಲಿನ ಮೇಲೆ ಹರಿದ ಲಾರಿ.

ಮಿರ್ಜಾನಿನ ಸಮೀಪ ಬೈಕ್ ಅಪಘಾತ : ಸವಾರನ ಕೈ ಕಾಲಿನ ಮೇಲೆ ಹರಿದ ಲಾರಿ.

SHARE

ಕುಮಟಾ: ತಾಲೂಕಿನ ಮಿರ್ಜಾನ ಬಳಿ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು ಬೈಕ ಸವಾರನ ಕೈ ಹಾಗೂ ಕಾಲಿನ ಮೇಲೆ ಲಾರಿ ಹರಿದ ಘಟನೆ ವರದಿಯಾಗಿದೆ.

ಬೈಕ್ ಸವಾರನಿಗೆ ಲಾರಿ ಢಿಕ್ಕಿ ಹೊಡೆದು ಬೈಕ ಸವಾರನ ಕೈ ಹಾಗೂ ಕಾಲಿನ ಮೇಲೆ ಹಾಯ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೈಕ್ ಸವಾರನ ಕೈ ಛಿದ್ರವಾಗಿದ್ದು ಕೆಲಕಾಲ ಜನತೆಯನ್ನು ಆತಂಕಕ್ಕೆ ಒಡ್ಡಿತು ಎನ್ನಲಾಗಿದೆ.

ಬೈಕ್ ಸವಾರನನ್ನು ಮಿರ್ಜಾನ ನಿವಾಸಿ ಮಹಮ್ಮದ್ ಎಂದು ಗುರುತಿಸಲಾಗಿದೆ

ಮಹಮ್ಮದ್ ನನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.