Home Local ಬ್ರಹ್ಮೂರಿನಲ್ಲಿ ಬಿಜೆಪಿ ಬೂತ್ ಕಮಿಟಿ ಹಾಗೂ ಪೇಜ್ ಪ್ರಮುಖರ ಸಭೆ ಯಶಸ್ವಿ

ಬ್ರಹ್ಮೂರಿನಲ್ಲಿ ಬಿಜೆಪಿ ಬೂತ್ ಕಮಿಟಿ ಹಾಗೂ ಪೇಜ್ ಪ್ರಮುಖರ ಸಭೆ ಯಶಸ್ವಿ

SHARE

ಅಂಕೋಲಾ: ತಾಲ್ಲೂಕಿನ ಬ್ರಹ್ಮೂರಿನಲ್ಲಿ ಬಿಜೆಪಿ ಬೂತ್ ಕಮಿಟಿ ಹಾಗೂ ಪೇಜ್ ಪ್ರಮುಖರ ಸಭೆಯು ಬೂತ್ ಕಮಿಟಿ ಕಾರ್ಯದರ್ಶಿಗಳಾದ ಜಿ. ಆರ್. ಭಟ್ಟರ ಮನೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ಮೋದಿಜಿಯವರ ಈ ಐದು ವರ್ಷಗಳ ಅತ್ಯುತ್ತಮ ಆಡಳಿತವನ್ನು ಕಂಡು ಈ ಬಾರಿ ಬಿಜೆಪಿಗೆ ಬೆಂಬಲ ನೀಡಲು ಬ್ರಹ್ಮೂರು ಗ್ರಾಮದ ಜೆಡಿಎಸ್ ಪಕ್ಷದ ಪ್ರಮುಖ ಕಾರ್ಯಕರ್ತರಾದ ನಂದೀಶ್ ದೇಶಬಂಡಾರಿ, ಶಾಂಬಾ ಮರಾಠಿ, ಸೀತಾರಾಮ್ ಪಿ. ನಾಯ್ಕ್, ಗಣೇಶ್ ಕೆ. ಮರಾಠಿ ಹಾಗೂ ನಾಗರಾಜ್ ಜಿ. ನಾಯ್ಕ್ ಇವರುಗಳು ಬಿಜೆಪಿಗೆ ಸೇರ್ಪಡೆಯಾದರು. ಇವರನ್ನು ಮಂಡಲಾಧ್ಯಕ್ಷ ನಿತ್ಯಾನಂದ ಗಾಂವ್ಕರ್ ಹಾಗೂ ಬೂತ್ ಅಧ್ಯಕ್ಷ ಸುಬ್ರಾಯ ಹೆಗಡೆ ಪಕ್ಷದ ಶಾಲು ಹೊದೆಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡರು.

ಮೊಗಟಾ ಶಕ್ತಿಕೇಂದ್ರದ ಪ್ರಭಾರಿಗಳಾದ ಬಿಂದೇಶ್ ನಾಯಕರು ಸೇರಿದ ಸಮಸ್ತ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ , ದೇಶದಲ್ಲೆಡೆ ಅಭಿವೃದ್ಧಿ ಕ್ರಾಂತಿ ಸೃಷ್ಠಿಸಿ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಶ್ರೀ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರ್ಕಾರವನ್ನು ಐತಿಹಾಸಿಕ ಮುನ್ನಡೆಯೊಂದಿಗೆ ಗೆಲ್ಲಿಸಲು ನಾವು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ವಿವರಿಸಿದರು.

ಮೊಗಟಾ ಶಕ್ತಿಕೇಂದ್ರದ ಪ್ರಭಾರಿಗಳಾದ ಬಿಂದೇಶ್ ನಾಯಕ ಮೊಗಟಾ, ಶಕ್ತಿಕೇಂದ್ರದ ಅಧ್ಯಕ್ಷರಾದ ದೇವಾನಂದ ನಾಯಕ, ವಿನಾಯಕ ನಾಯಕ ಮೊಗಟ ಹಾಗೂ ಬ್ರಹ್ಮೂರಿನ ಬಿಜೆಪಿಯ ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.