Home Local ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ

SHARE

ಕಾರವಾರ: ಸದಾಶಿವಗಡದ ಆಯಾನ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್ ಹಾಲ್‍ನಲ್ಲಿ ಅ.5 ರಂದು ಉಚಿತ ಹೃದಯ, ನರರೋಗ, ಎಲುಬು ಹಾಗೂ ಕ್ಯಾನ್ಸರ್ ರೋಗಗಳ ಉಚಿತ ತಪಾಸಣೆ ನಡೆಯಲಿದೆ.
ಕಾರವಾರ ಲಾಯನ್ಸ್ ಕ್ಲಬ್, ಕಲ್ಲೂರು ಎಜ್ಯೂಕೇಶನ್ ಟ್ರಸ್ಟ್ ಹಾಗೂ ಮಂಗಳೂರು ಕೆ.ಎಸ್. ಹೆಗಡೆ ಚೆರಿಟೆಬಲ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರ ಈ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಲಾಯನ್ಸ್ ಕ್ಲಬ್ ಅಧ್ಯಕ್ಷ ಮಹಮದ್ ಅಲ್ತಾಫ್ ಶೇಖ್, ಬಡಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಲಾಯನ್ಸ್ ಕ್ಲಬ್ ವಿವಿಧ ಸಂಘಟನೆಗಳ ಸಹಕಾರದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ. ಈ ಭಾರಿ ವಿಶೇಷವಾಗಿ ಕ್ಯಾನ್ಸರ್ ರೋಗ ತಪಾಸಣೆಯನ್ನೂ ಉಚಿತವಾಗಿ ನಡೆಸಲಾಗುತ್ತಿದೆ. ಕ್ಯಾನ್ಸರ್ ರೋಗ ತಜ್ಞರಾಗಿ ಡಾ. ವಿಶ್ವನಾಥ ಹಾಗೂ ಡಾ. ಜಯರಾಮ ಶೆಟ್ಟಿ ತಪಾಸಣೆ ನಡೆಸಲಿದ್ದಾರೆ. ಇದಲ್ಲದೆ ಹೃದಯ ಶಸ್ತ್ರಚಿಕಿತ್ಸಕರಾಗಿ ಡಾ. ಅಮಿತ್ ಕಿರಣ, ನರರೋಗ ತಜ್ಞರಾಗಿ ಡಾ. ಅನಂತನ್, ಫಿಸೀಸಿಯನ್ ಡಾ. ಮುರುಳಿದರ್ ಪೈ, ಎಲಬು ತಜ್ಞ ಡಾ. ಲೊರೆನ್ಸ್ ಮತಾಯಿಸ್, ಸಿಎಂಒ ಡಾ. ಮನೋಹರ್‍ರೆವಣಕರ್ ಅವರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನೀಡಲಿದ್ದಾರೆ ಎಂದು ತಿಳಿಸಿದರು.
ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಬೆಳಿಗ್ಗೆ 8 ರಿಂದ 9 ಗಂಟೆವರೆಗೆ ನೋಂದಣಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹಳೆಯ ವೈದ್ಯಕೀಯ ದಾಖಲಾತಿಗಳಿದ್ದಲ್ಲಿ ತರಬೇಕು. ಅವಶ್ಯವಿದ್ದವರಿಗೆ ಇಸಿಜಿ ಹಾಗೂ ಇಸಿಎಚ್‍ಒ ತಪಾಸಣೆ ಉಚಿತವಾಗಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಲಾ. ಅಲ್ತಾಫ್ ಶೇಖ್ 9845750183, ಲಾ. ಮಂಜುನಾಥ ಪವಾರ 9448405360 ಅವರನ್ನು ಸಂಪರ್ಕಿಸಬಹುದು ಎಂದರು. ಕಲ್ಲೂರು ಎಜ್ಯುಕೇಶನ್ ಟ್ರಸ್ಟ್‍ನ ಶಶಿಧರ್ ಮಾಸೂರಕರ್, ಸಾಧಿಕ್ ಖಾನ್, ಇಲಾಫ್ ಮುಲ್ಲಾ ಐಶ್ವರ್ಯ ಮಾಸರೂಕರ್ ಇದ್ದರು