Home Important ಶ್ರೀ ರಾಮಾಶ್ರಮದಲ್ಲಿ, ಶ್ರೀರಾಮನವಮೀ ಉತ್ಸವ

ಶ್ರೀ ರಾಮಾಶ್ರಮದಲ್ಲಿ, ಶ್ರೀರಾಮನವಮೀ ಉತ್ಸವ

SHARE

ಶ್ರೀರಾಮಚಂದ್ರಾಪುರಮಠದ  ಬೆಂಗಳೂರು ಶಾಖೆ ಶ್ರೀರಾಮಾಶ್ರಮ ಗಿರಿನಗರದಲ್ಲಿ, ಸೀತಾ ಲಕ್ಷ್ಮಣ ಹನುಮತ್ ಸಮೇತ ಶ್ರೀರಾಮನ ಸನ್ನಿಧಿಯಲ್ಲಿ ಶ್ರೀರಾಮನವಮೀ ಮಹೋತ್ಸವವು ದಿನಾಂಕ 12.04.2019 ಶುಕ್ರವಾರದಿಂದ ಆರಂಭಗೊಳ್ಳಲಿದೆ.

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಡಿಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿದೆ.

ಶ್ರೀರಾಮನವಮಿಯಂದು, ಬೆಳಿಗ್ಗೆ 9 ರಿಂದ ಲೋಕಕಲ್ಯಾಣಕ್ಕಾಗಿ ಶ್ರೀರಾಮತಾರಕ ಹವನವನ್ನು ಆಯೋಜಿಸಲಾಗಿದೆ ಮತ್ತು 10 ಗಂಟೆಯಿಂದ ಶ್ರೀರಾಮನ ಕುರಿತಾದ ಭಜನಾ ಸಂಕೀರ್ತನ ನಡೆಯಲಿದೆ. ಅಲ್ಲದೆ, ಶ್ರೀರಾಮನ ಜೀವನ ಚರಿತ್ರೆಯನ್ನಾಧರಿಸಿದ, “ಗೀತಾರಾಮಾಯಣ” ಶನಿವಾರ (13.04.2019 ) ಸಂಜೆ 5 ರಿಂದ ಸಂಪನ್ನವಾಗಲಿದೆ. “ಗಾಯನ, ಚಿತ್ರಣ, ವಾದನ, ವ್ಯಾಖ್ಯಾನಗಳ ಸಮ್ಮಿಲನವಾದ ಗೀತಾರಾಮಾಯಣ ಅತ್ಯಂತ ವಿಶಿಷ್ಟವಾಗಿ ಮೂಡಿಬರಲಿದೆ”.

ಶ್ರೀರಾಮನವಮೀ ಉತ್ಸವ ವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ :

ಶುಕ್ರವಾರ, 12.04.2019 ರ ಸಂಜೆ  6 ರಿಂದ ಶ್ರೀ ಮಹಾಗಣಪತಿ ಯಕ್ಷಾಗಾನ ಮಂಡಳಿ ಹಣಜಿಬೈಲ್ ಇವರಿಂದ ಯಕ್ಷಗಾನ ಕನಕಾಂಗಿ ಕಲ್ಯಾಣ ನಡೆಯಲಿದೆ.

ಶನಿವಾರ –  13.04.2019:

ಬೆಳಿಗ್ಗೆ 9ರಿಂದ ಶ್ರೀರಾಮತಾರಕ ಹವನ ಆರಂಭ

ಬೆಳಿಗ್ಗೆ 10ರಿಂದ  ಭಜನ ಸಂಕೀರ್ತನ 

11.30 ರಿಂದ ಕುಂಕುಮಾರ್ಚನೆ

ಮಧ್ಯಾಹ್ನ 12.00 ರಿಂದ  ಮಹಾಮಂಗಳಾರತಿ

ಸಂಜೆ 5. 00ರಿಂದ  ಗೀತಾರಾಮಾಯಣ (ಗಾಯನ, ಚಿತ್ರಣ, ವಾದನ, ವ್ಯಾಖ್ಯಾನಗಳ ಸಮ್ಮಿಲನ)

ಸಂಜೆ  7 ರಿಂದ ಅಷ್ಟಾವಧಾನ ಸಹಿತ ಮಹಾಮಂಗಳಾರತಿ

ಸರ್ವರಿಗೂ ಪಾಲ್ಗೊಂಡು ಶ್ರೀರಾಮನ ಕಾರುಣ್ಯಕ್ಕೆ ಪಾತ್ರರಾಗಬೇಕಾಗಿ ಶಾಖಾ ಮಠದ ಸೇವಾ ಸಮಿತಿ ಕೋರಿದೆ.