Home Local ಸ್ವತಃ ಸತೀಶ ಸೈಲ್ ಸಹ ಬಿಜೆಪಿಗೆ ಮತ ಹಾಕಲಿದ್ದಾರೆ ಎಂಬ ಭರವಸೆ ನನಗಿದೆ : ನಾಗರಾಜ...

ಸ್ವತಃ ಸತೀಶ ಸೈಲ್ ಸಹ ಬಿಜೆಪಿಗೆ ಮತ ಹಾಕಲಿದ್ದಾರೆ ಎಂಬ ಭರವಸೆ ನನಗಿದೆ : ನಾಗರಾಜ ನಾಯಕ

SHARE

ಕಾರವಾರ: ಸತೀಶ್ ಸೈಲ್‌ರಿಗೆ ಆನಂದ್ ಅಸ್ನೋಟಿಕರ್ ಪರವಾಗಿ ಪ್ರಚಾರ ಮಾಡಲು ಮನಸ್ಸಾಗುತ್ತಿಲ್ಲ. ತಾನು ಸಹ ಘಟಬಂಧದ ನಿಲುವಿನಂತೆ ಕೆಲಸ ಮಾಡಿದ್ದೇನೆ ಎಂದು ತೋರಿಸಲು ಪತ್ರಿಕಾಗೋಷ್ಠಿ ಕರೆದಿದ್ದು, ಸ್ವತಃ ಸತೀಶ ಸೈಲ್ ಸಹ ಬಿಜೆಪಿಗೆ ಮತ ಹಾಕಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಮಾಧ್ಯಮ ಸಂಚಾಲಕ ನಾಗರಾಜ ನಾಯಕ ಹೇಳಿದ್ದಾರೆ.

‘ಭೇಟಿ ಬಚಾವೋ, ಭೇಟಿ ಪಡಾವೋ’ ಎಂಬ ಹೆಸರಿನಲ್ಲಿ ಅರ್ಜಿ ತುಂಬಿಸಿ ಹಣ ನೀಡುತ್ತಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಬಿಜೆಪಿ ತಂತ್ರಗಾರಿಕೆ ನಡೆಸಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಅವರ ಆಪಾದನೆ ಸರಿಯಾದುದಲ್ಲ ಎಂದು ಅವರು ಕಿಡಿ ಕಾರಿದರು.

    ಬಿ.ಜೆ.ಪಿ ಪಕ್ಷಕ್ಕೆ ಇಂತಹ ದೈನೇಸಿ ಪರಿಸ್ಥಿತಿ ಎಂದಿಗೂ ಬಂದಿಲ್ಲ. ಈ ಜಿಲ್ಲೆಯಲ್ಲಿ ಬಿಜೆಪಿ ಬಹುಮತಕ್ಕಿಂತ ಸರ್ವಮತ ಪಡೆಯುವತ್ತ ಸಾಗಿರುವಾಗ ಈ ಕೀಳು ಮಟ್ಟದ ತಂತ್ರಗಾರಿಕೆ ಎಂದೂ ಮಾಡಲಾರದು ಎಂದು ಹೇಳಿದ್ದಾರೆ.

ಒಂದು ವೇಳೆ ಮುಗ್ಧರನ್ನು ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದ್ದರೆ ಸತೀಶ್ ಸೈಲ್ ಈ ಕುರಿತು ಪೊಲೀಸ್ ದೂರು ನೀಡಲಿ. ಯಾರು ಈ ಕೃತ್ಯ ನಡೆಸುತ್ತಿದ್ದಾರೆ ಎಂಬ ಹೂರಣ ಪೊಲೀಸ್ ತನಿಖೆಯಿಂದ ಹೊರಬರಲಿ ಎಂದು ಕರೆ ನೀಡಿದ್ದಾರೆ.

ಸತೀಶ ಸೈಲ್‌ರಿಗೆ ಸದ್ಯಕ್ಕೆ ಬಾಯಲ್ಲಿ ಒಂದು ಮಂತ್ರ, ಮನಸ್ಸಿನಲ್ಲಿ ಮತ್ತೊಂದು ಮಂತ್ರ ಇದೆ. ಸತೀಶ್ ಸೈಲ್‌ರ ಮನಸ್ಸಿನ ಆಸೆ ಪೂರೈಸಲಿದೆ. ಅನಂತ ಕುಮಾರ ಜಯಶಾಲಿಯಾಗಲಿದ್ದಾರೆ ಎಂದರು.