Home Local ಪತ್ರಿಕಾ ಭವನ ನಿರ್ವಹಣಾ ಸಮಿತಿಗೆ ನೂತನ ಆಧ್ಯಕ್ಷರಾಗಿ ಕಡತೋಕಾ ಮಂಜು ನೇಮಕ

ಪತ್ರಿಕಾ ಭವನ ನಿರ್ವಹಣಾ ಸಮಿತಿಗೆ ನೂತನ ಆಧ್ಯಕ್ಷರಾಗಿ ಕಡತೋಕಾ ಮಂಜು ನೇಮಕ

SHARE

ಕಾರವಾರ: ಪತ್ರಿಕಾ ಭವನ ನಿರ್ಮಾಣ ಸಮಿತಿಗೆ ನೂತನ ಅಧ್ಯಕ್ಷರಾಗಿ ಕಡತೋಕಾ ಮಂಜು ನೇಮಕವಾಗಿದ್ದಾರೆ.
ಶನಿವಾರ ಮಾ.೩೦ ರಂದು ನಡೆದ ನಿರ್ವಹಣಾ ಸಮಿತಿ ಸಾಮಾನ್ಯಸಭೆ ನಿಕಟ ಪೂರ್ವ ಅಧ್ಯಕ್ಷ ಟಿ.ಬಿ.ಹರಿಕಾಂತ ನೇತೃತ್ವದಲ್ಲಿ ಸಭೆ ನಡೆಯಿತು. ವಾರ್ಷಿಕ ಲೆಕ್ಕ ಪತ್ರ ಮಂಡಿಸಲಾಯಿತು. ಖಜಾಂಚಿ ಸುಭಾಷ ದೂಪದೊಂಡ ಲೆಕ್ಕ ಪತ್ರ ಮಂಡಿಸಿ,ಸಭೆಯ ಅನುಮೋದನೆ ಪಡೆದರು.

ಬಳಿಕ ನೂತನ ಪದಾಧಿಕಾರಿಗಳ ಬಗ್ಗೆ ಚರ್ಚೆಯಾಗಿ ಅಧ್ಯಕ್ಷ ಹುದ್ದೆಯನ್ನು ಒಪ್ಪಂದದಂತೆ ಕರ್ನಾಟಕ  ಜರ್ನಲಿಸ್ಟ ಯೂನಿಯನ್ ಗೆ ಬಿಟ್ಟುಕೊಡಲಾಯಿತು. ಪತ್ರಿಕಾ ಭವನದ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಕಡತೋಕಾ ಮಂಜು ಆಯ್ಕೆಯಾದರು. ಕಾರ್ಯದರ್ಶಿ ಯಾಗಿ ಶೇಷಗಿರಿ ಮಂಡಳ್ಳಿ ಯನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಸುನೀಲ್ ಹಣಕೋಣ,  ಖಜಾಂಚಿಯಾಗಿ ಉದಯ್ ಬರ್ಗಿ, ಪತ್ರಿಕಾ ಭವನದ ನಿರ್ವಹಣಾ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತ  ನಾಗರಾಜ್ ಹರಪನಹಳ್ಳಿ, ಗಜಾ ಸುರಂಗೇಕರ್, ಅಚ್ಚುತಕುಮಾರ್, ಗುರು ಹೆಗಡೆ ಕಾರ್ಯನಿರ್ವಹಿಸಲಿದ್ದಾರೆ.

ನೂತನ ಸಮಿತಿ ೨೦೧೯ ಎಪ್ರಿಲ್ ನಿಂದ ಆಸ್ತಿತ್ವಕ್ಕೆ ಬಂದಿದೆ .ವೇದಿಕೆಯಲ್ಲಿ ಪತ್ರಕರ್ತರಾದ ದೀಪಕ್ ಶೆಣ್ವಿ, ದೀಪಕ್ ಗೋಕರ್ಣ, ಉದಯ್ ನಾಯ್ಕ ಬರ್ಗಿ , ಶೇಷಗಿರಿ ಮುಂಡಳ್ಳಿ ಇದ್ದರು.