Home Important ಗುಣಗಣಿ ಆದರ್ಶದ ಖಣಿ ಪ್ರಭು ಶ್ರೀರಾಮಚಂದ್ರ: ಶ್ರೀರಾಮಾಶ್ರಮದಲ್ಲಿ ಸಂಪನ್ನವಾದ ಗೀತರಾಮಾಯಣ

ಗುಣಗಣಿ ಆದರ್ಶದ ಖಣಿ ಪ್ರಭು ಶ್ರೀರಾಮಚಂದ್ರ: ಶ್ರೀರಾಮಾಶ್ರಮದಲ್ಲಿ ಸಂಪನ್ನವಾದ ಗೀತರಾಮಾಯಣ

SHARE

ಇಕ್ಷ್ವಾಕು ವಂಶದ ದಶರಥ ಚಕ್ರವರ್ತಿಯ ಮಗನಾಗಿ ಜನಿಸಿದ ಶ್ರೀರಾಮ ಅವತಾರಿಪುರುಷ. ದುಷ್ಟ ಶಿಕ್ಷೆ- ಶಿಷ್ಟ ರಕ್ಷೆಯೇ ಉದ್ದೇಶವಾಗಿರುವ ಶ್ರೀರಾಮ, ಆದರ್ಶ ಪುರುಷನಾಗಿ ತನ್ನ ಬದುಕಿನುದ್ದಕ್ಕೂ ಮೇಲ್ಮೆಯನ್ನು ಮೆರೆದಿದ್ದಾನೆ. ತಂದೆ ತಾಯಂದಿರಿಗೆ ಯೋಗ್ಯ ಮಗನಾಗಿ, ಗುರುವಿಗೆ ಪ್ರಿಯ ಶಿಷ್ಯನಾಗಿ, ಮಿತ್ರರಿಗೆ ಮಿತ್ರನಾಗಿ, ಶತ್ರುವಿಗೆ ಭಯಕರನಾಗಿ, ಭಕ್ತರಿಗೆ ದೇವನಾಗಿ, ಪ್ರಜಾನುರಾಗಿಯಾಗಿ ಬದುಕಿದ ಶ್ರೀರಾಮ ಯಾವಕಾಲಕ್ಕೂ ಆದರ್ಶಮಾತ್ರವಲ್ಲ ಅನುಕರಣೆಗೆ ಯೋಗ್ಯವಾದವನು. ಎಳೆವೆಯಲ್ಲಿಯೇ ಯಜ್ಞಕಂಟಕರಾದವರನ್ನು ನಿವಾರಿಸ, ಶಿವಧನಸ್ಸನ್ನೆತ್ತಿ ಅದ್ವಿತೀಯ ಪರಾಕ್ರಮವನ್ನು ಮೆರೆದು, ಕೈಗೆ ಬಂದ ಅಧಿಕಾರವನ್ನು ತ್ಯಜಿಸಿ ತಂದೆಯ ಮಾತನ್ನು ನೆರವೇರಿಸಲು ಕಾಡಿಗೆ ನಡೆದ ಶ್ರೀರಾಮ ಆದರ್ಶ ಮಗ. ಶ್ರೀರಾಮನ ಸಹೋದರ ವಾತ್ಸಲ್ಯ ಅಮೋಘವಾದದು ಎಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಗೀತಾರಾಮಾಯಣ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಶ್ರೀ ಜಿ ಕೆ ಹೆಗಡೆಯವರು ಬಣ್ಣಿಸಿದರು. 

ಕಡತೋಕ ಶ್ರೀ ಶ್ರೀಪಾದ ಭಟ್ ಇವರ “ಜಯಗಂಗೆ ಜಯ ಭಾಗೀರತಿ” ಇತ್ಯಾದಿ ಸುಶ್ರಾವ್ಯವಾದ ಹಾಡುಗಳು, ಪ್ರಸಿದ್ಧ ತಬಲಾವಾದಕರಾದ ಶ್ರೀಗುರುಮೂರ್ತಿ ವೈದ್ಯರ ಸಮರ್ಥ ತಬಲಾ ಸಾಥ್ ಹಾಗು ಶ್ರೀಸುಬ್ರಹ್ಮಣ್ಯರವರ ಸೀತಾರ್ ವಾದನ ಸೇರಿದ್ದ ಸಾವಿರಾರು ಭಕ್ತಾದಿಗಳ ಕಣ್ಮನಗಳನ್ನು ತುಂಬುವಲ್ಲಿ ಯಶಸ್ವಿಯಾಯಿತು. 

ಪ್ರಸಿದ್ಧ ಚಿತ್ರಕಾರರಾದ ನೀರ್ನಳ್ಳಿ ಶ್ರೀ ಗಣಪತಿ ಹೆಗಡೆಯವರಿಂದ ಮೂಡಿಬಂದ ಸಾಂದರ್ಭಿಕ ಚಿತ್ರಗಳು ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.