Home Local ಸರಸ್ವತಿ ಪದವಿ ಪೂರ್ವ ಕಾಲೇಜಿನ ಉತ್ತಮ ಸಾಧನೆ :ವಾಣಿಜ್ಯ ವಿಭಾಗದಲ್ಲಿ 100%, ವಿಜ್ಞಾನ ವಿಭಾಗದಲ್ಲಿ 90%...

ಸರಸ್ವತಿ ಪದವಿ ಪೂರ್ವ ಕಾಲೇಜಿನ ಉತ್ತಮ ಸಾಧನೆ :ವಾಣಿಜ್ಯ ವಿಭಾಗದಲ್ಲಿ 100%, ವಿಜ್ಞಾನ ವಿಭಾಗದಲ್ಲಿ 90% ಫಲಿತಾಂಶ

SHARE

ಕುಮಟಾ : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಮಾರ್ಚ್ 2019 ರ ಫಲಿತಾಂಶ ಪ್ರಕಟಗೊಂಡಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು  100 ಶೇಕಡಾ ಫಲಿತಾಂಶ ದಾಖಲಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.      ಕುಮಾರಿ ಮಾನಸ ಪಂಡಿತ ಶೇ 96.66, ಕುಮಾರಿ ಯೋಗಿತಾ ತಾಂಡೇಲ ಶೇ 94.17, ಕುಮಾರ ದೀಪಕ ಕಿಣಿ ಶೇ 93.16, ಅಂಕ ಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಒಟ್ಟು 12 ವಿದ್ಯಾರ್ಥಿಗಳಲ್ಲಿ 06 ವಿದ್ಯಾರ್ಥಿಗಳು 85ಕ್ಕಿಂತ ಅಧಿಕ ಅಂಕಗಳಿಸಿದರೆ, 05 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಪಾಸಾಗಿರುತ್ತಾರೆ. ಅಲ್ಲದೇ ವ್ಯವಹಾರ ಅಧ್ಯಯನದಲ್ಲಿ ಇಬ್ಬರು ಮತ್ತು ಲೆಕ್ಕಶಾಸ್ತ್ರದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 90% ಫಲಿತಾಂಶ ದಾಖಲಾಗಿಸಿ ಕುಮಾರಿ ವಿ. ಅನ್ವಿತ ಶೇ 92.16,  ಕುಮಾರಿ ವೈಷ್ಣವಿ ನಾಯಕ ಶೇ. 91.66, ಕುಮಾರಿ ಅಂಕಿತ ನಾಡಕರ್ಣಿ ಶೇ. 90.33, ಅಂಕ ಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಒಟ್ಟು 20 ವಿದ್ಯಾರ್ಥಿಗಳಲ್ಲಿ 05 ವಿದ್ಯಾರ್ಥಿಗಳು ಶೇಕಡಾ 85ಕ್ಕಿಂತ ಅಧಿಕ ಅಂಕಗಳಿಸಿದರೆ, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಉತ್ರ್ತೀಣರಾಗಿ  ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಮತ್ತು ಸಂಸ್ಥೆಯ ಅಧ್ಯಕ್ಷರು ಮತ್ತು ವಿಶ್ವಸ್ಥರು ಅಭಿನಂದನೆ ಸಲ್ಲಿಸಿರುತ್ತಾರೆ.