Home Local ಗೋಕರ್ಣದಲ್ಲಿ ನಾಳೆ ‘ಕಾಮಾಘನಾಶಿನಿ ಸಂದರ್ಶನೋತ್ಸವ ಮತ್ತು’ ‘ಆನಂಗ ತ್ರಯೋದಶಿ’

ಗೋಕರ್ಣದಲ್ಲಿ ನಾಳೆ ‘ಕಾಮಾಘನಾಶಿನಿ ಸಂದರ್ಶನೋತ್ಸವ ಮತ್ತು’ ‘ಆನಂಗ ತ್ರಯೋದಶಿ’

SHARE

ಗೋಕರ್ಣ : ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ರೂಢಿಗತ ಪರಂಪರೆಯಂತೆ ವಿಕಾರಿ ಸಂವತ್ಸರದ ‘ ‘ಕಾಮಾಘನಾಶಿನಿ ಸಂದರ್ಶನೋತ್ಸವ ಮತ್ತು’ ‘ಆನಂಗ ತ್ರಯೋದಶಿ’ (ಸುಗ್ಗಿ ಉತ್ಸವ ) ದಿ 17-04-2019 ಬುಧವಾರ ಜರುಗಲಿದೆ . 

 17-04-2019 ಬುಧವಾರ ಮುಂಜಾನೆ ಅಘನಾಶಿನಿ ನದಿಗೆ ಪೂಜೆ ಸಲ್ಲಿಸಿ, ಸಂಕಲ್ಪಸ್ನಾನ ಪೂರೈಸಿದ ನಂತರ ಉತ್ಸವವು ತದಡಿಯ ಶ್ರೀ ಅಶ್ವಥಗಣಪತಿ ದೇವಾಲಯದಲ್ಲಿ ಕುಳಿತು ಪೂಜೆ ಸ್ವೀಕರಿಸಿ ಶ್ರೀ ದೇವಾಲಯಕ್ಕೆ ಮರಳುತ್ತದೆ . 
17-04-2019 ಬುಧವಾರ ರಾತ್ರಿ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಶ್ರೀ ದೇವರ ಪಲ್ಲಕ್ಕಿ ಉತ್ಸವ, ಸ್ಥಳೀಯ ಹುಳಸೆಕೇರಿ ಹಾಲಕ್ಕಿ ಪಂಗಡದವರಿಂದ ಸುಗ್ಗಿ ಕುಣಿತ ಸೇವೆ , ಕಾಮದಹನ ಕಾರ್ಯಕ್ರಮ ಜರುಗಲಿದೆ .