Home Local ಕುಮಟಾದ ಆರ್.ಎಸ್.ಎಸ್ ಕನಸು ನನಸು

ಕುಮಟಾದ ಆರ್.ಎಸ್.ಎಸ್ ಕನಸು ನನಸು

SHARE

ಕುಮಟಾ: ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ 91 ವರ್ಷಗಳಿಂದ ಬೆಳೆದಂತೆ ಬಹಳ ಕಠಿಣವಾದ ಸಂಘರ್ಷದ ಹಾದಿಯಿಂದ ದಾಟಿ ಬಂದಿದೆ. ಕುಟುಂಬಕ್ಕೆ ಸ್ವಂತ ಮನೆಯಿರಬೇಕೆಂಬ ಆಸೆಯಿದ್ದಂತೆ ಸ್ವಂತ ಕಾರ್ಯಾಲಯವಿರಬೇಕೆಂಬ ಕನಸು ನನಸಾಗುತ್ತಿದೆ. ಕಾರ್ಯಾಲಯ ಸಮಾಜದ ಕತ್ತಲನ್ನು ದೂರ ಮಾಡುವ, ಜ್ಞಾನ, ಕರ್ಮ, ಭಕ್ತಿಯ ಕೇಂದ್ರವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ಶಂಕರಾನಂದ ಹೇಳಿದರು. ಅವರು ಬುಧವಾರ ಕರಾವಳಿಯ ಕೇಂದ್ರವಾದ ಕುಮಟಾದ ಆರ್ಎಸ್ಎಸ್ ನೂತನ ಕಟ್ಟಡದ ಭೂಮಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಕಲ್ಪತರು ಸೇವಾ ಪ್ರತಿಷ್ಠಾನದ ಅಧ್ಯಕ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಹನುಮಂತ ಶಾನಭಾಗ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಾಖೆಯ ಮೂಲಕ ವ್ಯಕ್ತಿ ನಿರ್ಮಾಣ ಮಾಡುತ್ತದೆ. ಸ್ವಯಂಸೇವಕರು ಸೇವಾ ಚಟುವಟಿಕೆ ಮಾಡುತ್ತಾರೆ. ಸೇವಾ ಚಟುವಟಿಕೆಗೆ ಪೂರಕವಾಗಿ ಈ ಕಾರ್ಯಾಲಯ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ ಸಂಘಚಾಲಕ ಅರವಿಂದರಾವ್ ದೇಶಪಾಂಡೆ ಮಾತನಾಡಿ ಶ್ರೀಕಲ್ಪತರು ಸೇವಾ ಪ್ರತಿಷ್ಠಾನ ಕಾರವಾರ ಜಿಲ್ಲೆಯಲ್ಲಿ ಸಮಾಜಮುಖಿ ಕಾರ್ಯಮಾಡುತ್ತಿರುವ ಸೇವಾ ಸಂಸ್ಥೆಯಾಗಿದ್ದು ಸಮಾಜದಲ್ಲಿ ಸಂಸ್ಕಾರ, ಜೀವನ ಮೌಲ್ಯ ಸನಾತನ ಭಾರತೀಯ ಪರಂಪರೆಯನ್ನು ಬೆಳೆಸುವ ಉದ್ದೇಶ ಹೊಂದಿದ್ದಾಗಿದೆ. ಪ್ರತಿಯೊಬ್ಬರಿಗೂ ಇದು ನಮ್ಮ ಕಟ್ಟಡವೆಂಬ ಭಾವನೆಯ ಜೊತೆಗೆ ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು. ದಯಾನಂದ ಶೇಟ್ ಸ್ವಾಗತಿಸಿದರು. ಚಂದ್ರಶೇಖರ ಹೆಗಡೆ ವಂದಿಸಿದರು. ಜಿಲ್ಲೆಯಿಂದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.