Home Local ಅಂಕೋಲಾದಲ್ಲಿ ಅಪಘಾತ ಓರ್ವ ಮೃತ

ಅಂಕೋಲಾದಲ್ಲಿ ಅಪಘಾತ ಓರ್ವ ಮೃತ

SHARE

ಅಂಕೋಲಾ : ರಾ.ಹೇ 63ರ ಸರಳೇಬೈಲ್ ಬಳಿ ಕೆಟ್ಟು ನಿಂತ ಲಾರಿಗೆ  ಹಿಂಬದಿಯಿಂದ ಬಂದ ಲಾರಿ ಬಡಿದ ಪರಿಣಾಮ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಅಂಕೋಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ.

ಕುಷ್ಟಗಿ ತಾಲೂಕಿನ ಬಸವರಾಜ ಮಹಾಂತೇಶ ಕರಡಿ (25 ) ಎಂಬಾತನೇ ಮೃತಪಟ್ಟವ. ಯಲ್ಲಾಪುರ ಮಾರ್ಗವಾಗಿ ಹೊಗುತ್ತಿರುವ ಲಾರಿಯೊಂದು ಸರಳೇಬೈಲ್ ಬಳಿ ರಸ್ತೆಯ ಮೇಲೆ ಕೆಟ್ಟು ನಿಂತಿತ್ತು. ಆ ಸಮಯದಲ್ಲಿ ಇನ್ನೊಂದು ಲಾರಿ ಅದೆ ಮಾರ್ಗವಾಗಿ ಹೊಗುತ್ತಿದ್ದು ನಿಂತಿರುವ ಲಾರಿಯನ್ನು ದಾಟಿ ಮುಂದೆ ಹೊಗುವ ಸಂದರ್ಭದಲ್ಲಿ ಎದುರಿನಿಂದ ಬರುತ್ತಿರುವ ಇನ್ನೊಂದು ವಾಹನವನ್ನು ಗಮನಿಸದೆ ನಿಂತಿರುವ ಲಾರಿಯ ಕಡೆ ತನ್ನ ಲಾರಿಯನ್ನು ಚಾಲಕ ಚಲಾಯಿಸಿದರ ಪರಿಣಾಮ ಈ ಅಫಘಾತ ಸಂಭವಿಸಿದೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ 108ನಲ್ಲಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ . ಈ ಕುರಿತು ಅಂಕೋಲಾ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.