Home Local ಕೊಂಕಣ ಎಜ್ಯುಕೇಶನ್ ನಲ್ಲಿ ಮಾತೃಮಂಡಳಿ ಉದ್ಘಾಟನೆ

ಕೊಂಕಣ ಎಜ್ಯುಕೇಶನ್ ನಲ್ಲಿ ಮಾತೃಮಂಡಳಿ ಉದ್ಘಾಟನೆ

SHARE

ಸಿ.ವಿ.ಎಸ್.ಕೆ ಫ್ರೌಡಶಾಲೆ ಸರಸ್ವತಿ ವಿದ್ಯಾಕೇಂದ್ರ ಮತ್ತು ಶ್ರೀ ರಂಗದಾಸ ಶಾನಭಾಗ ಹೆಗಡೆಕರ್ ಬಾಲಮಂದಿರ  ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗೋ ಪೂಜೆ, ಮತ್ತು ಮಾತೃ ಪೂಜೆಯೊಂದಿಗೆ ಮಾತೃ ಮಂಡಳಿ ಉದ್ಘಾಟನಾ ಕಾರ್ಯಕ್ರಮವನ್ನು ಕುಮಟಾದ ಸರಸ್ವತಿ ಮಾಳಪ್ಪ ಕಾಮತ್ ಕೃಷಿ ವೃತ್ತಿ ಮತ್ತು ಕೌಶಲ್ಯ ಅಭಿವೃದ್ದಿ ಸಂಸ್ಥೆ ವಿದ್ಯಾಗಿರಿ,ಕಲಬಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ  ಉದ್ಘಾಟಕರಾಗಿ ಬಂಟ್ವಾಳದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂಥ ಸಹ ಸಂಚಾಲಿಕಾ, ಶ್ರೀರಾಮ ವಿದ್ಯಾಕೇಂಧ್ರ ಕಲ್ಲಡ್ಕದ ಡಾ. ಕಮಲಾ ಭಟ್ ಆಗಮಿಸಿದ್ರು. ಇವರು ಮೊದಲಿಗೆ ಗೋ ಪೂಜೆ ನೆರವೆರಿಸಿದ್ರು, ನಂತರ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಈ ವೇಳೆ ಮಾತನಾಡಿದ ಕಮಲಾ ಭಟ್ ಪ್ರತಿಯೊಂದು ತಾಯಿ ತನ್ನ ಮಗು ಹೊಟ್ಟೆಯಲ್ಲಿರುವಾಗಿಂದಲೆ ಒಳ್ಳೆ ಕೆಲಸವನ್ನು ಮಾಡಬೇಕು, ತಾಯಿಯ ಪ್ರತಿಯೊಂದು ಒಳ್ಳೆ ಕೆಲಸ ಮಗುವಿನ ಮೇಲೆ ಪರಿಣಾಮ ಬಿರುತ್ತದೆ. ತಾಯಿಯಾದವಳು ಒಳ್ಳೆಯ ಕೆಲಸ ಮಾಡುವ ಮೂಲಕ ಮಗುವಿನ ಮೇಲೆ ಉತ್ತಮ ಪರಿಣಾಮ ಬಿಳುವಂತೆ ಮಾಡಬೇಕು. ಅದಾಗ ಮಾತ್ರ ಮಕ್ಕಳು ಸಮಾಜಕ್ಕೆ,ದೇಶಕ್ಕೆ ಆಸ್ತಿಯಾಗುತ್ತಾರೆ ಎಂದರು ನಂತರ ಸ್ವದೇಶಿ ವಸ್ತುವನ್ನು ಬಳಸುವ ಮೂಲಕ ಚೀನಾ ವಸ್ತುವನ್ನು ಬಹಿಷ್ಕರಿಸುವಂತೆಯು ಮನವಿ ಮಾಡಿದ್ರು.. ಸಭೆಯಲ್ಲಿ ಉಪಸ್ಥಿತರಿದ್ದ ಕೊಂಕಣ ಎಜುಕೇಶನ್  ಕಾಯದರ್ಶಿ ಮುರುಳಿಧರ ಪ್ರಭು ಮಾತನಾಡಿ ತಾಯಿ ಎನ್ನುವ ಮೂದಲ ಗುರುವನ್ನು ಮೂಲೆ ಗುಂಪಾಗಿಸದೆ ಎರಡನೆ ಗುರುವಾದ ಶಿಕ್ಷಕರ ಜೊತೆ ಸೇರುವಂತೆ ಮಾಡಿದ್ರೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬಹುದು ಎನ್ನುವ ಉದ್ದೆಶದಿಂದ ಮಾತೃ ಮಂಡಳಿಯನ್ನು ರಚಿಸಿದ್ದೇವೆ ಎಂದರು. ಭಗಿನಿ ಗಂಗಾ ಮಾತನಾಡಿ ವಿದ್ಯಾಥಿ೵ ಜೀವನ ಹೇಗಿರಬೇಕು, ತಾಯಿ ಹೇಗಿದ್ದರೆ ಮಕ್ಕಳು ಹೇಗೆ ಇರಬಲ್ಲರು ಎಂಬುದನ್ನು ತಿಳಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಪ್ರಮುಖವಾದ ಮಾತೃ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ತಮ್ಮ ತಮ್ಮ ತಂದೆ ತಾಯಿಯರಿಗೆ ಪೂಜೆ ಮಾಡಿ ಆರ್ಶಿವಾದ ಪಡೆದರು. ಮತ್ತು ಕಾರ್ಯಕ್ರಮದಲ್ಲಿ ನಡೆದ ವಿದ್ಯಾರ್ಥಿಗಳ ಶ್ರೀ ಕೃಷ್ಣನ ರೂಪಕ ಎಲ್ಲಾರ ಗಮನ ಸಳೆಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಲ್ಲಿ  ಶಿಶು ಶಿಕ್ಷಣದ ಪ್ರಮುಖರಾದ ಭಗಿನಿ ಗಂಗಾ. ಕಾಶಿನಾಥ ನಾಯಕ, ಸುಲೊಚನಾ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿದ್ಯಾರ್ಥಿಗಳು. ಪಾಲಕರು ಶಿಕ್ಷಕರು ಪಾಲ್ಗೊಂಡಿದ್ರು..