Home Local ವಿಜಯವೇದಾಂಗ ಸ್ವಾಮಿಗಳಿಗೆ ಗೋಕರ್ಣ ಗೌರವ

ವಿಜಯವೇದಾಂಗ ಸ್ವಾಮಿಗಳಿಗೆ ಗೋಕರ್ಣ ಗೌರವ

SHARE
ಪ ಪೂ ಶ್ರೀ ಶ್ರೀ ವಿಜಯವೇದಾಂಗ ಸ್ವಾಮಿಗಳು , ಪೂರ್ಣಾನಂದಮಠ , ಬೀಳಗಿ, ಬಾಗಲಕೋಟ ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ  ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು. 
ಉಪಾಧಿವಂತ ಮಂಡಳಿ ಸದಸ್ಯ , ಉದ್ಯಮಿ,  ಶ್ರೀ ವಿನಾಯಕ ಕೊಡ್ಲೆಕೆರೆ ಇವರು  ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು .  ಉಪಾಧಿವಂತ ಮಂಡಳದ  ಸದಸ್ಯರು ಉಪಸ್ಥಿತರಿದ್ದರು . ವೇ ವಿಶ್ವನಾಥ  ಭಟ್  ಪೂಜೆ ಕೈಂಕರ್ಯ ನೆರವೇರಿಸಿದರು .