Home Information ಹೊನ್ನಾವರದಲ್ಲಿ ಕ್ಯಾಂಪಸ್ ಸಂದರ್ಶನ

ಹೊನ್ನಾವರದಲ್ಲಿ ಕ್ಯಾಂಪಸ್ ಸಂದರ್ಶನ

SHARE

ಹೊನ್ನಾವರ ಎಸ್.ಡಿ.ಎಮ್ ಪದವಿ ಮಹಾವಿದ್ಯಾಲಯದಲ್ಲಿ ಅಗಸ್ಟ್ 14 , ಸೋಮವಾರ ಬೆಳಿಗ್ಗೆ 10.30. ಗಂಟೆಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.

ಇಂಟೆನ್ಸ್ ಎಕ್ವಾಟಿಕಾ (Intense Aquatica Total Pvt Ltd) ಎನ್ನುವ ಖಾಸಗೀ ಕಂಪನಿಯು ಫೀಲ್ಡ್ ಟೆಕ್ನಿಷಿಯನ್ ಹುದ್ದೆಗಳಿಗೆ ಕ್ಯಾಂಪಸ್ ಸಂದರ್ಶನ ನಡೆಸಲಿದೆ.

2016-17 ನೇ ಸಾಲಿನಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಪದವಿ ಪಡೆದ ಉತ್ತರಕನ್ನಡ ಜಿಲ್ಲೆಯ ಕಾರವಾರ,ಅಂಕೋಲಾ,ಕುಮಟಾದಲ್ಲಿ,
ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ವಿದ್ಯಾರ್ಥಿಗಳು ಭಾಗವಹಿಸಬಹುದು

ಆಯ್ಕೆಯಾದವರು ಉತ್ತರಕನ್ನಡ ಜಿಲ್ಲೆಯಲ್ಲಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ …ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ ..

ಆಸಕ್ತರು ಅಗಸ್ಟ್ 12 ರ ಸಂಜೆ 3 ಗಂಟೆಯೊಳಗೆ ಪ್ಲೇಸಮೆಂಟ್ ಆಫೀಸರ್ ಡಾ.||ಡಿ.ಎಲ್ ಹೆಬ್ಬಾರ್ (9448435061) ಇವರ ಬಳಿ ಹೆಸರು ನೊಂದಾಯಿಸುವಂತೆ ಪ್ರಾಚಾರ್ಯ ಪ್ರೊ.ಎಸ್.ಎಸ್ ಹೆಗಡೆ ಸೂಚಿಸಿದ್ದಾರೆ …