Home Local ಕನ್ನಡ ಕಡ್ಡಾಯಕ್ಕಾಗಿ ಮನವಿ

ಕನ್ನಡ ಕಡ್ಡಾಯಕ್ಕಾಗಿ ಮನವಿ

SHARE

ದಾಂಡೇಲಿ: ನಗರದ ಬ್ಯಾಂಕ್ ಹಾಗೂ ಇನ್ನಿತರ ಸರಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ಈ ಎಲ್ಲ ಕಚೇರಿಗಳಲ್ಲಿ ತಮ್ಮ ಆಡಳಿತ ವ್ಯವಹಾರವನ್ನು ಮತ್ತು ಅದಕ್ಕೆ ಬೇಕಾದ ಮಾಹಿತಿಗಳು, ಮುದ್ರಿತ ವ್ಯವಹಾರಗಳು ಕನ್ನಡದಲ್ಲೆ ಇರಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ದ ನಗರ ಘಟಕವು ಶುಕ್ರವಾರ ವಿಶೇಷ ತಹಶೀಲ್ದಾರ್ ಶೈಲೇಶ್.ಎಸ್.ಪರಮಾನಂದ ಮನವಿ ನೀಡಿ ಆಗ್ರಹಿಸಿದೆ.

ಮನವಿಯಲ್ಲಿ ನಗರದ ವಿವಿಧ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಅನ್ಯಬಾಷಿಕರಾಗಿದ್ದರೂ ಅವರು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು. ಹಿಂದಿ ಭಾಷಾ ಅನುಷ್ಟಾನಕ್ಕೆ ಹಿಂದಿ ಭಾಷಾ ಘಟಕ ತೆರೆದಂತೆ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಅನುಷ್ಟಾನಗೊಳಿಸಲು ಎಲ್ಲ ಬ್ಯಾಂಕಿ ಶಾಖೆಗಳಲ್ಲೂ ಕನ್ನಡ ಘಟಕವನ್ನು ಕಡ್ಡಾಯವಾಗಿ ತೆರೆಯಬೇಕು ಮತ್ತು ಸ್ಥಳೀಯ ಭಾಷಿಕರಿಗೆ ಆದ್ಯತೆ ನೀಡುವ ಡಾ:ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವುದರ ಮೂಲಕ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಸಂಪೂರ್ಣವಾಗಿ ಸ್ಥಳೀಯರಿಗೆ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿಲಾಗಿದೆ.

ಮನವಿಯನ್ನು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ದ ನಗರ ಘಟಕದ ಪದಾಧಿಕಾರಿಗಳಾದ ರಿಯಾಜ ಲಿಂಬುವಾಲೆ, ಅಶೋಕ ನಾಯ್ಕ, ಚೇತನ ಕಲಘಟಗಿ, ಮಂಜುನಾಥ.ಪಿ., ನಿಕಿಲ್ ಸೊಳಂಕಿ, ರಾಜಾ ಮಾದರ. ಅಸ್ಲಂ ದೇಸಾಯಿ, ಮಹಮ್ಮದ ಸರವನ್, ಇಸ್ಮಾಯಿಲ್ ಬುದಿಯಾ, ಆರೀಪ್ ಮುಲ್ಲಾ, ಬಸವರಾಜ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.