Home Local 16 ರಂದು ‘ಕೃಷ್ಣಂ ವಂದೇ ಜಗದ್ಗುರುಮ್’

16 ರಂದು ‘ಕೃಷ್ಣಂ ವಂದೇ ಜಗದ್ಗುರುಮ್’

SHARE

ಕುಮಟಾ: ಇಲ್ಲಿಯ ಸಂಸ್ಕøತಿ ಉಪನ್ಯಾಸ ವೇದಿಕೆ ಆಶ್ರಯದಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ದಿ. 16 ಬುಧವಾರ ಅಪರಾಹ್ನ 3 ಗಂಟೆಗೆ
“ಕೃಷ್ಣಂ ವಂದೇ ಜಗದ್ಗುರುಮ್” ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ. ಜಿ. ಜಿ. ಹೆಗಡೆ ಮತ್ತು ಡಾ. ಅಶೋಕ ಭಟ್ ಹಳಕಾರ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ಎನ್. ಆರ್. ಗಜು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ “ಕೃಷ್ಣಂ ವಂದೇ ಜಗದ್ಗುರುಮ್” ವಿಷಯದ ಮೇಲೆ ಏರ್ಪಟ್ಟ ಭಾಷಣ ಸ್ಪರ್ಧೆಯಲ್ಲಿ ವಿಜೇತ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ ರೂ.700, 500 ಮತ್ತು 300 ಗಳನ್ನು ವಿತರಿಸಲಾಗುವುದೆಂದು ಸಂಸ್ಕøತಿ ಉಪನ್ಯಾಸ ವೇದಿಕೆಯ ಅಧ್ಯಕ್ಷರು ಹಾಗೂ ನಾಡಿನ ಹಿರಿಯ ಪತ್ರಕರ್ತರು ಮತ್ತು ಅಂಕಣಕಾರರಾದ ಪ್ರೊ. ವಿಷ್ಣು ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.