Home Local ಶ್ರೀ ಶ್ರೀ ಶಿವಯೋಗಿನಿ ಜಗದೇವಿ ಮಾತಾರಿಗೆ ಗೋಕರ್ಣ ಗೌರವ

ಶ್ರೀ ಶ್ರೀ ಶಿವಯೋಗಿನಿ ಜಗದೇವಿ ಮಾತಾರಿಗೆ ಗೋಕರ್ಣ ಗೌರವ

SHARE

ಪ ಪೂ ಶ್ರೀ ಶ್ರೀ ಶಿವಯೋಗಿನಿ ಜಗದೇವಿ ಮಾತಾ , ಜಗದೇವಿ ಮಾತಾ ಆಶ್ರಮ , ವಿಜಯಪುರ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು.


ಗೋಕರ್ಣ ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಮಹಾಲಕ್ಷ್ಮಿ ಭಡ್ತಿ ಇವರು ದೇವಾಲಯದ ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವಿಸಿದರು . ಉಪಾಧಿವಂತ ಮಂಡಳದ ಸದಸ್ಯರು ಉಪಸ್ಥಿತರಿದ್ದರು . ವೇ ವಿಶ್ವನಾಥ ಭಟ್ ಪೂಜೆ ಕೈಂಕರ್ಯ ನೆರವೇರಿಸಿದರು .