Home Local ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ

ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ

SHARE

ಶಿರಸಿ: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ನಗರದ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಸಿಬ್ಬಂದಿಗಳಿಗೆ ರಕ್ಷಾ ಬಂಧನದ ಹಿನ್ನಲೆಯಲ್ಲಿ ರಾಕಿ ಕಟ್ಟಿ, ಸಿಹಿ ಹಂಚಿದರು. ಇದಕ್ಕೂ ಮೊದಲು ನಗರದ ಬನವಾಸಿ ರಸ್ತೆಯಲ್ಲಿರುವ ಮಹಾದೇವ ಭಟ್ಟ ಖೂರ್ಸೆ ಕಿವುಡ ಮತ್ತು ಮೂಕರ ಶಾಲೆಯ ವಿದ್ಯಾರ್ಥಿಗಳಿಗೆ ರಕ್ಷೆಯನ್ನು ಕಟ್ಟಿ ಸಿಹಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ರೇಖಾ ಹೆಗಡೆ, ಜಿ.ಪಂ ಸದಸ್ಯೆ ಉಷಾ ಹೆಗಡೆ,ಪವಿತ್ರಾ ಹೊಸೂರು, ವೀಣಾ ಶೆಟ್ಟಿ, ನಗರ ಘಟಕದ ಗಣಪತಿ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.