Home Local ಅಖಿಲ ಭಾರತ ಯಾನ ಸಂಗೀತ ಕಾರ್ಯಕ್ರಮ

ಅಖಿಲ ಭಾರತ ಯಾನ ಸಂಗೀತ ಕಾರ್ಯಕ್ರಮ

SHARE

ಗಂಧರ್ವ ಕಲಾ ಕೇಂದ್ರ ಕುಮಟಾ ಮತ್ತು ಪಂಡಿತ್ ಷಡಕ್ಷರಿ ಗವಾಯಿ ಅಕಾಡೆಮಿ ಕುಮಟಾ ಹಾಗೂ ಸ್ವರ ಸಂಗಮ ಕೂಜಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಿರಣ ಸಂಗೀತ ಅಕಾಡೆಮಿ ಧಾರವಾಡ ಇವರಿಂದ ಅಖಿಲ ಭಾರತ ಯಾನ ಸಂಗೀತ ಕಾರ್ಯಕ್ರಮ ದಿನಾಂಕ ೧೩-೦೮-೨೦೧೭ ರಂದು ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯ ಕೂಜಳ್ಳಿಯಲ್ಲಿ ನಡೆಯಲಿದೆ. ಡಾ ವಿ ಕೆ ಹಂಪಿಹೊಳಿ ಸಭಾಧ್ಯಕ್ಷ ತೆ ವಹಿಸಲಿದ್ದಾರೆ.ವಿ.ಕೆ ಭಟ್ ಕೂಜಳ್ಳಿ ರೋಟರಿ ಅಧ್ಯಕ್ಷರಾದ ವಸಂತ ರಾವ್, ಪತ್ರಕರ್ತ ಸುಬ್ರಾಯ ಭಟ್ ಅತಿಥಿಗಳಾಗಿರುವರು. ಡಾ ಅನುಪಮಾ ಗುಡಿ ,ಭಾರ್ಗವಿ ಕುಲಕರ್ಣಿ ,ಗಾಯತ್ರಿ ಗುಡಿ ಇವರ ಗಾಯನ ಹಾಗೂ ಕಲ್ಯಾಣ್ ದೇಶಪಾಂಡೆ ,ಅಂಗದ ದೇಸಾಯಿ ಅವರ ತಬಲಾ ಜುಗಲ್ಬಂದಿ ಹಾಗೂ ಧನುಷ್ ಶಾನ್ಭಾಗ್ ಇವರ ಬಾನ್ಸುರಿ ವಾದನ ನಡೆಯಲಿದೆ ಕಾರ್ಯಕ್ರಮಕ್ಕೆ ಸಂಘಟಕರು ಸರ್ವರನ್ನು ಸ್ವಾಗತಿಸಿದ್ದಾರೆ.