Home Local ವಿದ್ಯುತ್ ತಂತಿ ಸ್ಪರ್ಷಿಸಿ ವ್ಯಕ್ತಿ ಸಾವು ಕೆಲಕಾಲ‌ ಉದ್ವಿಗ್ನ ವಾತಾವರಣ

ವಿದ್ಯುತ್ ತಂತಿ ಸ್ಪರ್ಷಿಸಿ ವ್ಯಕ್ತಿ ಸಾವು ಕೆಲಕಾಲ‌ ಉದ್ವಿಗ್ನ ವಾತಾವರಣ

SHARE

ಕುಮಟಾ ; ಜೋತುಬಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ವ್ಯಕ್ತಿಯೋರ್ವ ಮತಪಟ್ಟ ಘಟನೆ ಕುಮಟಾ ತಾಲೂಕಿನ ಶಶಿಹಿತ್ತಲಿನಲ್ಲಿ ನಡೆದಿದೆ.

ಇಂದು ಮುಂಜಾನೆ ಮೀನು ಗಾರಿಕೆಗೆ ತೆರಳುತ್ತಿದ್ದ ಈಶ್ವರ್ ನಾರಾಯಣ್ ಹರಿಕಂತ್ರ ಮೃತಪಟ್ಟ ದುರ್ದೈವಿಯಾಗಿದ್ದು, ಈತನ ಸಾವಿಗೆ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಂತ ಹಳೆಯ ಜೀರ್ಣಾವಸ್ತೆಯಲ್ಲಿ ಇರುವ ವಿದ್ಯತ್ ತಂತಿಗಳನ್ನು ಬದಲಾಯಿಸದೇ ಬಿಟ್ಟಿರುವುದು ಅವಘಡಕ್ಕೆ ಕಾರಣವೆನ್ನಲಾಗಿದೆ.

ಸ್ಥಳಕ್ಕೆ ಕುಮಟಾ ಶಾಸಕರಾದ ಶ್ರೀಮತಿ ಶಾರದಾ ಶೆಟ್ಟಿ ಅವರು ಭೇಟಿ ನೀಡಿದ್ದು ಮೃತರ ಕುಟುಂಬಕ್ಕೆ ತಮ್ಮ ಸಂಸ್ಥೆ ವತಿಯಿಂದ ಪರಿಹಾರ ನೀಡುವ ಬರವಸೆ ನೀಡಿದರು. ಹಾಗೂ ಹೆಸ್ಕಾಂನಿಂದ ಸಿಗಬಹುದಾದ ಪರಿಹಾರವನ್ನು ಕುಟುಂಬಕ್ಕೆ ನೀಡುವುದಾಗಿ ಹೇಳಿದ್ದಾರೆ.

ಆಕ್ರೋಶಗೊಂಡ ಸ್ಥಳೀಯರು ಶವಸಂಸ್ಕಾರಕ್ಕೂ ಪೂರ್ವದಲ್ಲಿ ಹಳೆಯ ತಂತಿಗಳನ್ನು ಬದಲಾಯಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಆಗ್ರಹಿಸಿದರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಹೆಸ್ಕಾಂ ನಿಂದ ಮೃತರ ಕುಟುಂಬಕ್ಕೆ ೩ ಲಕ್ಷ ಪರಿಹಾರ ನೀಡಲಾಗಿದೆ.