Home Local ಕೃಷ್ಣಾಷ್ಟಮೀ ಪೂಜೆ ಹಾಗೂ ದೇವರ ತೊಟ್ಟಿಲು ಮಹೋತ್ಸವದ.

ಕೃಷ್ಣಾಷ್ಟಮೀ ಪೂಜೆ ಹಾಗೂ ದೇವರ ತೊಟ್ಟಿಲು ಮಹೋತ್ಸವದ.

SHARE

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಕೃಷ್ಣಾಷ್ಟಮೀ ಪೂಜೆ ಹಾಗೂ ದೇವರ ತೊಟ್ಟಿಲು ಮಹೋತ್ಸವದ ಸಂಭ್ರಮ

ಅಮೃತಧಾರಾ ಗೋಶಾಲೆ ಬಜಕೂಡ್ಲುವಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯಕ್ತ ಸಾಯಂಕಾಲ 5 ರಿಂದ ಬಜನೆ, ಗೋಪೂಜೆ, ಗೋಪಾಲಕೃಷ್ಣ ಪೂಜೆ, ದುರ್ಗಾ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಹಾಗು ಲಲಿತಾ ಸಹಸ್ರನಾಮ ಪಾರಾಯಣ ವೇ.ಮೂ. ಕೇಶವಪ್ರಸಾದ ಭಟ್ಟ ಕೂಟೇಲು ಹಾಗು ವೇ.ಮೂ. ಶ್ರೀನಿಧಿ ಭಟ್ಟ ಇವರ ನೇತೃತ್ವದಲ್ಲಿ ಜರಗಿತು.

ರಾತ್ರಿ 10 ಘಂಟೆಗೆ ಕೃಷ್ಣ ಜನ್ಮಾಷ್ಟಮಿ ಪೂಜೆ ಕೃಷ್ಣ ಜನ್ಮೋತ್ಸವ, ಅರ್ಘ್ಯ ಪ್ರದಾನ, ಜೋಗುಳ ಗೀತೆಯೊಂದಿಗೆ ಶ್ರೀ ದೇವರಿಗೆ ತೊಟ್ಟಿಲು ಮಹೋತ್ಸವ, ಶಯನೋತ್ಸವ ವೈಭವದಿಂದ ಜರಗಿತು.

ಮಹಾಮಂಡಲ ಧರ್ಮ ಕರ್ಮ ವಿಭಾಗ ಪ್ರಮುಖ ಹಾಗು ಎಣ್ಮಕಜೆ ವೈದಿಕ ಪ್ರಮುಖ ವೇ.ಮೂ. ಕೇಶವಪ್ರಸಾದ ಭಟ್ಟ ಕೂಟೇಲು, ಗೋಶಾಲೆ ಅದ್ಯಕ್ಷ ಜಗದೀಶ್ ಬಿ.ಜಿ, ಕೋಶಾಧಿಕಾರಿ ಶ್ರೀಧರ ಭಟ್ಟ ಬಜಕೂಡ್ಲು, ಸಂಘಟನಾ ಕಾರ್ಯದರ್ಶಿ ವಿನಯಕೃಷ್ಣ ಕಾನದಮೂಲೆ, ಎಣ್ಮಕಜೆ ವಲಯದ ಸೇವಾವಿಭಾಗ ಪ್ರಮುಖ ಶಂಕರನಾರಾಯಣ ಪ್ರಕಾಶ ಅಬರಾಜೆ, ಸಾಮರಸ್ಯ ಪ್ರಮುಖರಾದ ಗೋಪಾಲಕೃಷ್ಣ ಭಟ್ಟ ಬದಿಯಾರು, ಕೃಷಿ ಪ್ರದಾನರಾದ ಗಣರಾಜ ಕಡಪ್ಪು, ಉಲ್ಲೇಖ ಪ್ರಮುಖ ವೆಂಕಟ್ರಮಣ ಭಟ್ಟ ಕೋಡುಮಾಡು, ಗುರಿಕ್ಕಾರರಾದ ಶಂಕರ ಭಟ್ಟ ಅತ್ತಾಜೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಹಾಲಿಂಗೇಶ್ವರ ಭಜನಾಮಂಡಳಿ ಬಜಕೂಡ್ಲು ಇವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು, ಶಿವಗಿರಿ ಲೈಟ್ಸ್ & ಸೌಂಡ್ಸ ಇವರು ದ್ವನಿ ಬೆಳಕು ಹಾಗು ದೀಪಾಲಂಕಾರದ ವ್ಯವಸ್ಥೆ, ಬಾಲಕೃಷ್ಣ ಅಡಿಗ ಕಾಟುಕುಕ್ಕೆ ಇವರು ನೈವೇದ್ಯ ಹಾಗು ಉಪಹಾರದ ವ್ಯವಸ್ಥೆ ಮಾಡಿಕೊಟ್ಟರು.