Home Article ಅಮ್ಮ,…. ಎಲ್ಲಿ ನನ್ನ ಅಪ್ಪ?

ಅಮ್ಮ,…. ಎಲ್ಲಿ ನನ್ನ ಅಪ್ಪ?

SHARE

ಮಾಲಿನಿ ಹೆಗಡೆ. ಬೆಂಗಳೂರು.
Cell: 81055 75598

 

ಆಗ ನನಗಿನ್ನೂ 03 ವರ್ಷ ವಯಸ್ಸು.ಆ ದಿನ ರಾತ್ರೆ ಹಾಯಾದ ನಿದ್ದೆ ಅಲ್ಲಿ ಇದ್ದೆ.ಮದ್ಯ ರಾತ್ರಿ ಅದೇನೋ ಜೋರು ಜೋರು ಆಗಿ ಮಾತು ಕೇಳಿಸಿತು. ನೋಡಿದೆ, ಅಪ್ಪ ಅಮ್ಮ ಇಬ್ಬರು ಅದೇನೋ ಜೋರಾಗಿ ಕೂಗಾಡುತ್ತಾ ಇದ್ದರು. ಅದು ಗಲಾಟೆಯೋ, ಜಗಳವೋ, ಹೊಡೆದಾಟವೋ,ತಿಳಿಯುವ ವಯಸ್ಸು ನನದಾಗಿರಲಿಲ್ಲ.

ಪುನಃ ನಿದ್ದೆ ಹೋದೆ. ಮರುದಿನ ಕಣ್ಣು ಬಿಟ್ಟಾಗ ಅಜ್ಜಿಯ ಮನೆ ಅಲ್ಲಿ ಇದ್ದೆ. ಮೊದಲು ಕೇಳಿದ್ದೆ, ಅಮ್ಮ, ಎಲ್ಲಿ ನನ್ನ ಅಪ್ಪ? ಅದಕ್ಕೆ ಅಜ್ಜಿಯ ಸಿಟ್ಟಿನ ಮುಖವೇ ನನಗೆ ಉತ್ತರ ನೀಡಿತು. ಆದರೂ ಮನೆ ಎಲ್ಲಾ ಹುಡುಕಿದೆ, ಅಪ್ಪನಿಗೋಸ್ಕರ. ಹೂ, ಹೂ, ಅಪ್ಪ ಎಲ್ಲೂ ಕಾಣಲಿಲ್ಲ, ಪುನಃ ಅದೇ prastne , ಅಮ್ಮ, ನನ್ನ ಅಪ್ಪ ಎಲ್ಲಿ? ಚೆನ್ನಾಗಿ ಬಿತ್ತು ಹೊಡೆತ ಅಮ್ಮನ ಕೈ ಇಂದ. ಆ ಮನುಷ್ಯ ಸರಿ ಇಲ್ಲಾ, ಅದಕ್ಕೆ ನಿನ್ನೆ ರಾತ್ರಿನೇ ಅವನನ್ನು ಬಿಟ್ಟು ಬಂದೆ ಅಂತ. ಏನು ಅರ್ಥ ಆಗಿಲ್ಲ ನನ್ನ ಪುಟ್ಟ ಮೆದುಳಿಗೆ, , ಈ ಸರಿ ಇಲ್ಲ ಅಂದರೆ ಏನು ಅಂತ.

ಸರಿ, ಆ ದಿನ ಆಟ ಆಡಲು ಹೊರಗಡೆ ಹೋದೆ. ಎಲ್ಲ ಮಕ್ಕಳದು ಒಂದೇ , ಚೇತು ನಿನ್ನ ಅಪ್ಪ ಎಲ್ಲಿ? ನಿನ್ನ ಅಮ್ಮ ಅವನನ್ನು ಬಿಟ್ಟು ಬಂದಳಂತೆ, ನೀನು ಇನ್ನು ಅಜ್ಜಿ ಮನೆಯಲ್ಲೇ ಇರುತಿಯ ಅಂತ? ಅಳು ಉಕ್ಕಿ ಉಕ್ಕಿ ಬಂತು,ನನಗು ಅಪ್ಪ ಇದ್ದಾನೆ, ಅಪ್ಪ ಮಾಡಿದ ಮನೆ ಇದೆ, ನಾನು ಅಲ್ಲಿಗೆ ಹೋಗೆ ಹೋಗುತ್ತೇನೆ ಅಂತ ಕೂಗಿ ಕೂಗಿ ಹೇಳ ಬೇಕೆನಿಸಿತು. ಆದರೆ ಯಾರಿಗೆ ಹೇಳಲಿ? ನನ್ನ ಮನಸ್ಸಿನ ದುಃಖ,ಅಪ್ಪನ ಮೇಲಿನ ಪ್ರೀತಿ? ಪುನಃ ಮನೆಗೆ ಬಂದು ಕೇಳಿದೆ..ಅಮ್ಮ, ಎಲ್ಲಿ ನನ್ನ ಅಪ್ಪ?

ಈ ಸಲ ಹೊಡೆತ ಬಿದ್ದಿದ್ದು ಅಜ್ಜಿಯ ಕೈ ಇಂದ, ಊರೆಲ್ಲ ಸಾಲ ಮಾಡಿ ನಮ್ಮ ಮರ್ಯಾದೆ ತೆಗೆದ ಅಪ್ಪ, ಇವಳಿಗೆ ಬೇಕಂತೆ, ಹೀಗೆ ಬಿಟ್ಟರೆ, ಇವಳು ಅವನಂತೆ ಆಗ್ಗುತ್ತಾಳೆ ಇತ್ಯಾದಿ. ಅವನು, ಅಂದರೆ ಅಪ್ಪ ಅಂತ ಆಗ ಗೊತ್ತಾಯ್ತು.ಅಂತೂ ನನ್ನ ಪುಟ್ಟ ಮನಸ್ಸಿಗೆ ಒಂದಂತೂ ಅರ್ಥ ಆಯಿತು, ಇನ್ನು ನನ್ನ ಅಪ್ಪ ಬರೋಲ್ಲ ಅಂತ.

ರಾತ್ರಿ ಇಡೀ ಅಪ್ಪನ ನೆನಪು, ಅಪ್ಪನ ಪ್ರೀತಿ, ಅವನ ಕೈ ಹಿಡಿದು ನಡೆದ ಆ ದಿನಗಳು,.ಇನ್ನೆಲ್ಲಿ ಆ ಪ್ರೀತಿ? ಪುಟ್ಟ ಮನಸ್ಸು ನೊಂದು, ನೊಂದು, ಬೆಳಿಗ್ಗೆ ಹೊತ್ತಿಗೆ ಜೋರಾದ ಜ್ವರ ಬಂತು. ಅಮ್ಮ ನನ್ನನ್ನು ಸಿಟಿ ಅಲ್ಲಿ ಇರುವ ಹಾಸ್ಪಿಟಲ್ ಗೆ ಕರೆದು ಕೊಂಡು ಹೋದಳು. ಆಗಲು ನನಗೆ ಅಪ್ಪನದೇ ನೆನಪು. ಡಾಕ್ಟರ್, ಅಡ್ಮಿಟ್ ಮಾಡಬೇಕು ಅಂತ ಅಂದರು. ಆಗಲು ಮನಸ್ಸು ಬಯಸುತ್ತಾ ಇದ್ದದ್ದು ಅಪ್ಪನನ್ನು.
ಅಮ್ಮ, ನನ್ನನ್ನು ಮಲಗಿಸಿ ಮೆಡಿಸಿನ್ ತರಲು ಹೊರಟಳು, ಆಗ ನಾನು ಹೊರಗಡೆ ನೋಡಿದೆ, ಹೌದು, ಅವರೇ ನನ್ನ ಅಪ್ಪ. ಹಳದಿ ಅಂಗಿ ಹಾಕಿಕೊಂಡು ಬಂದಿದ್ದಾರೆ, ಕೈ ಅಲ್ಲಿ ಒಂದು ಎಳೆ ನೀರು ಇದೆ. ಸಂಶಯವೇ ಇಲ್ಲ, ನನ್ನನ್ನು ನೋಡಲೆಂದೇ ಬಂದಿದ್ದಾರೆ. ಎದ್ದು ಹೋಗಲು ನನಗೆ ಮೈ ಅಲ್ಲಿ ಶಕ್ತಿಯೇ ಇಲ್ಲ, ಅಪ್ಪ ಅಪ್ಪ ಅಂತ ಒಳಗಿನಿಂದಲೇ ಕೂಗುತ್ತಾ ಇದ್ದೆ. ಆದರೆ ನನ್ನ ಅಮ್ಮ ಮತ್ತು ಅಜ್ಜಿ ಸೇರಿ ಅಪ್ಪನನ್ನು ಅಲ್ಲಿಂದಲೇ ಕಳಿಸಿ ಬಿಟ್ಟರು, ಒಳಗೆ ಬಿಡಲೇ ಇಲ್ಲ. ಅಪ್ಪ, ಹೊರಟೆ ಹೋದ. ನನ್ನ ಕಣ್ಣೀರು ಯಾರಿಗೂ ಕಾಣಲೇ ಇಲ್ಲ. ಅದೇ ಕೊನೆ, ಮುಂದೆ ನಾನು ಎಂದು ನನ್ನ ಅಪ್ಪನನ್ನು ನೋಡಲೇ ಇಲ್ಲ.
ಅದಾದ ಸ್ವಲ್ಪ ದಿನಕ್ಕೆ ಒಂದಿನ ಅಜ್ಜಿ ಫುಲ್ ಖುಷಿ ಅಲ್ಲಿ ಹೇಳ್ತಾ ಇದ್ಲು, ಅಂತೂ ಡೈವೋರ್ಸ್ ಸಿಕ್ಕಿತ್ತು. ಅಂತ. ಆ ಪದದ ಅರ್ಥ ಆಗಲು ನನಗೆ ಮುಂದೆ ಅದೆಷ್ಟೋ ವರುಷಗಳು ಬೇಕಾಯಿತು.

next ಅದ್ಯಾಯ ನನನ್ನು ಶಾಲೆಗೇ ಸೇರಿಸೋದು. ಮೊದಲ praste , ಅಪ್ಪನ ಹೆಸರೇನು? ಅಜ್ಜಿ ಯ ಉತ್ತರಕ್ಕಿಂತ ಮೊದಲೇ ನಾನು ಹೇಳಿದೆ, ನನ್ನ ಅಪ್ಪ, ಅನಂತು ಅಂತ. ವಾಹವಾ..ಅದೆಷ್ಟು ಖುಷಿ ಆಯಿತು ಗೊತ್ತಾ? ಅಪ್ಪನ ಹೆಸರನ್ನು ಹೇಳುವಾಗ, ಈಗಲಾದರೂ ಹೆಸರಿನ ಜೊತೆ ನನ್ನ ಅಪ್ಪ ಇರುತಾನಲ್ಲ ಅಂತ?

ಆದರೆ ಅಲ್ಲಿಗೆ ಸಮಸ್ಯೆ ಮುಗಿದಿಲ್ಲ, ಎಲ್ಲ ರು ಅಪ್ಪನ ಜೊತೆ ಪೇರೆಂಟ್ಸ್ ಮೀಟಿಂಗ್ ಬರುತ್ತಾ ಇದ್ದಾರೆ, ನನಗೆ ಈ ಅಜ್ಜಿ ಬರ್ತಾ ಇದ್ದಿದ್ದು. ನೋಡಿದರೆ ಸಾಕು ಕೋಪ ಬರ್ತಾ ಇತ್ತು. ನನ್ನ ಅಪ್ಪನನ್ನು ದೂರ ಮಾಡಿದವಳು ಈ ಅಜ್ಜಿನೇ ಅಂತ. ಎಲ್ಲ ಮಕ್ಕಳು ಕೇಳ್ತಾ ಇದ್ದರು, ಚೇತು, ನಿನ್ನ ಅಪ್ಪ ಎಲ್ಲಿ ಅಂತ? ಆಗ ಅಜ್ಜಿಯ ರೆಡಿಮೇಡ್ ಆನ್ಸರ್ ..ಅವಳಿಗೆ ಅಪ್ಪ ಇಲ್ಲ, ನಾವೇ ಎಲ್ಲಾ ಅಂತ. ಅಂತೂ ಈ ಅಜ್ಜಿ ನನ್ನ ಅಪ್ಪನನ್ನು ಕೊಂದಿಯೇ ಬಿಟ್ಟಳು.

ಮತ್ತೆ ಹೈಸ್ಕೂಲ್ ಶಿಕ್ಷಣಕ್ಕೆ ನನ್ನನ್ನು ಸಿಟಿ ಗೆ ಕರೆದು ಕೊಂಡು ಬಂದರು. ಅಲ್ಲಿಯೂ ಇಡೀ ಅಪ್ಪನ prastne . ಈಗ ಅಜ್ಜಿ ಒಂದು ಉಪಾಯ ಮಾಡಿದಳು, ನನ್ನ ಹೆಸರಿನ ಜೊತೆ ಆ ಸಿಟಿ ಯ ಹೆಸರನ್ನು ಹಾಕಿ, ನನ್ನ ಅಪ್ಪನನ್ನು permanent ಆಗಿ ಕ್ಲೋಸ್ ಮಾಡಿ ಬಿಟ್ಟಳು. ಅವರ ಲೆಕ್ಕ, ಇನ್ನು ಅಪ್ಪನ ಹೆಸರನ್ನು ಯಾರು ಕೇಳೋಲ್ಲ ಅಂತ, ಆದರೆ ಅವರಿಗೇನು ಗೊತ್ತು? ಅದೇ ಅಪ್ಪನ ಮಗಳಲ್ವಾ ನಾನು? ನನಗೆ ಅಪ್ಪ ಎಂದೆಂದೂ ಅವನೇ ಅಲ್ವ? ಈ ಸಣ್ಣ ಉತ್ತರ ಈ ದೊಡ್ಡವರಿಗೆ ಯಾಕೆ ಅರ್ಥ ಆಗಿಲ್ಲ?
ಸಿಟಿ ಗೆ ಬಂದ ಮೇಲು ಅದೆಷ್ಟೋ ರಾತ್ರೆ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಾ ಇದ್ದಳು, ಬಹುಶ ಅವಳಿಗೂ ನನ್ನ ಅಪ್ಪನ ನೆನಪು ಆಗ್ತಾ ಇತ್ತೇನೋ? ಯಾರಿಗೆ ಗೊತ್ತು? ಈ ಸಿಟಿ ಯಲ್ಲೂ ನನ್ನ ಅಪ್ಪನಿಗೋಸ್ಕರ ಹುಡುಕುತ್ತಾ ಇದ್ದೆ, ಹೂ ಹೂ, ಎಲ್ಲೂ ಅವನ ಸುಳಿವಿಲ್ಲ.ಹಳದಿ ಅಂಗಿ ಕಂಡರೆ ಸಾಕು, ಅಪ್ಪ ನೇನೋ ಅಂತ ನೋಡತಾ ಇದ್ದೆ.

ಹಾಗೆ ವರುಷಗಳು ಕಳೆಯಲು ನನ್ನ ಮದುವೆಯ ಪ್ರಸ್ತಾಪ ಬಂತು. ಆಗಲು ಮೊದಲು ಬರ್ತಾ ಇದ್ದಿದ್ದೇ , ಹುಡುಗಿಯ ಅಮ್ಮ ನಿಗೆ ಡೈವೋರ್ಸ್ ಆಗಿದೆಯಂತೆ. ತಾಯಿ ಅಂತೆ ಮಗಳಾದರೆ ಕಷ್ಟ ಅಂತ. ಹೀಗೆ ಅದೆಷ್ಟೋ ಸಂಬಧಗಳು ತಪ್ಪಿ ಹೋದವು. ಆದರೆ ಪಾಪ ನನ್ನ ಅಮ್ಮ.  ನಂದು ಏನು ತಪ್ಪಿಲ್ಲ, ಎಲ್ಲ ಈ ಅಜ್ಜಿಯದೇ ಕಾರುಬಾರು ಅಂತ ಕೋಪ ಬರ್ತಾ ಇತ್ತು. ಒಂದೊಂದು ತಪ್ಪಿ ಹೋದಾಗಲೂ, ನನಗೆ, ನಾನೇನು ತಪ್ಪು ಮಾಡಿದ್ದೇನೆ ಅಂತ ಅರ್ಥ ಆಗ್ತಾ ಇರಲಿಲ್ಲ.

ಹೀಗಿರುವಾಗ ಒಂದು ದಿನ ಒಂದು ಒಳ್ಳೆಯ ಸಂಬಧ ಬಂತು. ಹುಡುಗನಿಗೆ ಮೊದಲೇ ಅಮ್ಮ, ಅಜ್ಜಿ ಎಲ್ಲಾ ವಿಷಯ ಹೇಳಿದ ಕಾರಣ ,ಅವರು ಏನು ತಕರಾರು ಮಾಡದೇ ಒಪ್ಪಿಕೊಂಡರು.
ಮದುವೆಯಲ್ಲೂ ಎಲ್ಲರು ಮಾತನಾಡಿ ಕೊಳ್ಳುತ್ತಾ ಇದ್ದಿದ್ದು, ಪಾಪ, ಅಪ್ಪ ಇಲ್ಲದೆ ಬೆಳೆದ ಹುಡುಗಿ, ಒಳ್ಳೆಯದಾದರೆ ಸಾಕು ಅಂತ. ಆಗಲು ನನ್ನ ಮನಸ್ಸು ಕೂಗಿ ಕೂಗಿ ಹೇಳ್ತಾ ಇತ್ತು, ನನ್ನ ಅಪ್ಪ ಇದ್ದಾನೆ,ಒಂದಿನ ಬಂದೆ ಬರುತ್ತಾನೆ ಅಂತ. ಆಗಾಲೂ ನನ್ನ ಮನಸ್ಸು ಕಾಣದ ಅಪ್ಪನಿಗೋಸ್ಕರ ಮಿಡಿಯುತ್ತಾ ಇತ್ತು.

ಈಗ ನಾನು ನನ್ನ ಗಂಡ ಮುದ್ದು ಮಡದಿ, ಅತ್ತೆಯ ಪ್ರೀತಿಯ ಸೊಸೆ, ಇನ್ನಾರು ತಿಂಗಳಲ್ಲಿ ಪುಟ್ಟ ಮಗುವಿಗೆ ಅಮ್ಮ ಆಗುತ್ತೇನೆ. ಒಂದಂತೂ ನಿರ್ಧಾರ ಮಾಡಿ ಆಗಿದೆ, ಏನೇ ಕಷ್ಟ, ನಷ್ಟ ಬರಲಿ, ಗಂಡನಿಂದ ದೂರ ಹೋಗಿ, ಪುನಃ ನನ್ನ ಮಗು ನನ್ನನ್ನು ಅಮ್ಮ, ನನ್ನ ಅಪ್ಪ ಎಲ್ಲಿ ಅಂತ ಕೇಳಬಾರದು ಅಂತ.

ಈಗಲೂ ಒಳ ಮನಸ್ಸು ಕಾಣದ ಅಪ್ಪನನ್ನು ಹಂಬಲಿಸುತ್ತಾ ಇದೆ, ಕೇಳುತ್ತಾ ಇದೆ…ಅಮ್ಮ…ಎಲ್ಲಿ ನನ್ನ ಅಪ್ಪ?