Home Local ಕುಮಟಾದ ಚಂದನ್ ಕುಬಾಲ್ ರಾಷ್ಟ್ರಮಟ್ಟಕ್ಕೆ.

ಕುಮಟಾದ ಚಂದನ್ ಕುಬಾಲ್ ರಾಷ್ಟ್ರಮಟ್ಟಕ್ಕೆ.

SHARE

ಮಾಹಿತಿ ತಂತ್ರಜ್ಞಾನ ಆಧಾರಿತ ಶಾಲಾ ಮಟ್ಟದ ‘ಡೆಲ್ ಚಾಂಪ್ಸ್ 2017’ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆನರಾ ಪದವಿ ಪೂರ್ವ ಕಾಲೇಜು ಮಂಗಳೂರಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಂದನ್ ಕುಬಾಲ್ ದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಈತನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳವೆದಂಡೆಯ ಶ್ರೀಮತಿ ಗೀತಾ ಮತ್ತು ಜೈವಿಠಲ್ ಕುಬಾಲ ರವರ ಸುಪುತ್ರನಾಗಿದ್ದಾನೆ. ಇವರಿಗೆ ರಾಷ್ಟ್ರಮಟ್ಟದಲ್ಲಿ ಯಶಸ್ಸು ಸಿಗಲೆಂದು ‘ಕುಬಾಲ ಕುಟುಂಬ’ದ ಸ್ನೇಹಿತರ ಪರವಾಗಿ ಜಯದೇವ ಬಳಗಂಡಿ ಅವರು ಶುಭ ಹಾರೈಸಿದ್ದಾರೆ.