Home Local ಶ್ರೀಗುರುಲಿಂಗೇಶ್ವರ ಸ್ವಾಮೀಜಿ ಯವರಿಗೆ ಗೋಕರ್ಣ ಗೌರವ

ಶ್ರೀಗುರುಲಿಂಗೇಶ್ವರ ಸ್ವಾಮೀಜಿ ಯವರಿಗೆ ಗೋಕರ್ಣ ಗೌರವ

SHARE
ಪ ಪೂ ಶ್ರೀ ಶ್ರೀಗುರುಲಿಂಗೇಶ್ವರ ಸ್ವಾಮೀಜಿ , ತಪೋವನ, ಬೆಳಗಾವಿ   ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು. 
 
ಹಾಲಕ್ಕಿ ಸಮಾಜದ ಶ್ರೀ ವೆಂಕಟೇಶ ಗೌಡ ಇವರು ದೇವಾಲಯದ ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು .  ಉಪಾಧಿವಂತ ಮಂಡಳದ  ಸದಸ್ಯರು ಉಪಸ್ಥಿತರಿದ್ದರು . ವೇ ವಿಶ್ವನಾಥ  ಭಟ್  ಪೂಜೆ ಕೈಂಕರ್ಯ ನೆರವೇರಿಸಿದರು .