Home Local ಕಾರವಾರ ಸಮುದ್ರದಲ್ಲಿ ಮುಳುಗುತ್ತಿದ್ದವನ ರಕ್ಷಣೆ

ಕಾರವಾರ ಸಮುದ್ರದಲ್ಲಿ ಮುಳುಗುತ್ತಿದ್ದವನ ರಕ್ಷಣೆ

SHARE

ಕಾರವಾರ: ಸಮುದ್ರದಲ್ಲಿ ಮುಳಗುತ್ತಿದ್ದ ಪ್ರವಾಸಿಗನೊಬ್ಬನನ್ನು ಜೀವ ರಕ್ಷಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಮುರುಡೇಶ್ವರ ಕಡಲ ಕಿನಾರೆಯಲ್ಲಿ ನಡೆದಿದೆ.

ಪ್ರವಾಸಿಗ ತಮಿಳುನಾಡು ಮೂಲದ ಜಯಕಾಂತ ಹರಿಕಾಂತ್ರ ಎಂದು ತಿಳಿದು ಬಂದಿದೆ. ಸ್ನೇಹಿತರ  ಜೊತೆ ಪ್ರವಾಸಕ್ಕೆ ಬಂದಿದ್ದ ಜಯರಾಮ್ ನೀರಿನಲ್ಲಿ ಆಟವಾಡುತ್ತ ಸಮುದ್ರದ ಅಲೆಗಳಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಅಲ್ಲಿಯೇ ಇದ್ದ ಜೀವ ರಕ್ಷಕ ದಳದ ಸಿಬ್ಬಂದಿ ಈತ ನೀರು ಪಾಲಾಗುವುದನ್ನು ಗಮನಿಸಿ ರಕ್ಷಿಸಿದ್ದಾರೆ. ಮುರುಡೇಶ್ವರ ಸಮುದ್ರದಲ್ಲಿ ಈ ರೀತಿ ಘಟನೆಗಳು ಹೆಚ್ಚಾಗುವುದರಿಂದ ಜೀವ ರಕ್ಷಕ ದಳದ ಸಿಬ್ಬಂದಿಗಳು ಅಲ್ಲಿಯೆ ಬೀಡು ಬಿಟ್ಟಿರುತ್ತಾರೆ.