Home Important ಸಿಂಪಲ್ಲಾಗಿ ರಜಿಸ್ಟರ್ ಮ್ಯಾರೇಜ್ ಆದ ಪ್ರಿಯಾಮಣಿ

ಸಿಂಪಲ್ಲಾಗಿ ರಜಿಸ್ಟರ್ ಮ್ಯಾರೇಜ್ ಆದ ಪ್ರಿಯಾಮಣಿ

SHARE

ಬೆಂಗಳೂರು: ಬಹುಭಾಷಾ ತಾರೆ ನಟಿ ಪ್ರಿಯಾಮಣಿ ಬಹುಕಾಲದ ಗೆಳೆಯ ಮುಸ್ತಾಫ ರಾಜ್ ಜೊತೆ ವೈವಾಹಿಕ ಜೀವನಕ್ಕೆ ಇಂದು  ಕಾಲಿಟ್ಟಿದ್ದಾರೆ. ಜಯನಗರ ನೋಂದಣಿ ಕಚೇರಿಯಲ್ಲಿ ಸರಳ ವಿವಾಹವಾಗುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ಬಹು ದಿನಗಳ ಸ್ನೇಹಿತ ಉದ್ಯಮಿ ಮುಸ್ತಫಾ ರಾಜ್‌ ಜೊತೆ ವಿವಾಹ ಬಂಧನಕ್ಕೆ ಒಳಗಾದ ಪ್ರಿಯಾಮಣಿ ಒಂದು ತಿಂಗಳ ಹಿಂದೆಯೇ  ಜಯನಗರ ವಿವಾಹ ನೋಂದಣಿ ಕಚೇರಿಯಲ್ಲಿ ಮದುವೆಯನ್ನು ರಿಜಿಸ್ಟರ್ ಮಾಡಿಸಿದ್ದರು.

ಸರಳವಾಗಿ ಮದುವೆಯಾಗುವುದನ್ನು ಹಿಂದೆಯೇ ತಿಳಿಸಿದ್ದ ಪ್ರಿಯಾಮಣಿ ಮದುವೆ ಯಾರನ್ನೂ ಕರೆಯುವುದಿಲ್ಲ ಎಂದು ತಿಳಿಸಿದ್ದರು. ಸರಳ ವಿವಾಹ ಸಮಾರಂಭದಲ್ಲಿ ಎರಡು ಕುಟುಂಬಗಳ ಕೆಲವೇ ಕೆಲವು ಮಂದಿ ಮಾತ್ರ ಭಾಗವಹಿಸಿದ್ದರು.ಮದುವೆಯ ಬಳಿಕ ದುಬೈಯಲ್ಲಿ ನೆಲೆಸಲಿದ್ದೇನೆ ಎಂದು ಈ ಹಿಂದೆ ಪ್ರಿಯಾಮಣಿ ತಿಳಿಸಿದ್ದರು.