Home Local ಬೈಕ್ ಸ್ಕಿಡ್ : ಸವಾರ ಸಾವು

ಬೈಕ್ ಸ್ಕಿಡ್ : ಸವಾರ ಸಾವು

SHARE

ಕಾರವಾರ : ಇಲ್ಲಿನ ಹಬ್ಬುವಾಡ ಇಸ್ಕಾನ್ ಟೆಂಪಲ್ ಬಳಿ ಬೈಕ್ ಸ್ಕಿಡ್ ಆಗಿ ಓರ್ವ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೃತನನ್ನು ಸಂತೋಷ (೨೮) ಎಂದು ಗುರುತಿಸಲಾಗಿದೆ. ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುವಾಗ ಸ್ಕಿಡ್ ಆಗಿ ಬಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ‌.
ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.