Home Local ಬೂತ್ ಮಟ್ಟದ ಸಭೆಗಾಗಿ ಪೂರ್ವಭಾವಿ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

ಬೂತ್ ಮಟ್ಟದ ಸಭೆಗಾಗಿ ಪೂರ್ವಭಾವಿ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

SHARE

ಕಾರವಾರ : ಸೆಪ್ಟೆಂಬರ್ 11ರಂದು ನಡೆಯುವ ಕಾರವಾರ- ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಬೂತ್ ಮಟ್ಟದ ಸಭೆಯ ಪೂರ್ವಭಾವಿ ಕಾರ್ಯಕರ್ತರ ಸಭೆಯು ಶನಿವಾರ ನಗರದ ಕೋಡಿಬಾಗದಲ್ಲಿನ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಯಿತು.
ಈ ವೇಳೆ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ, ಕಾರವಾರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ ವೈಗಣಂಕರ, ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಮಾಳ್ಸೇಕರ, ಅಂಕೋಲಾ ತಾಲೂಕಿನ ಬ್ಲಾಕ್ ಅಧ್ಯಕ್ಷ ಪಾಂಡುರಂಗ ಗೌಡ, ಕಾಂಗ್ರೆಸ್ ಮುಂಖಡ ದಿಗಬಂರ ಶೇಟ್, ಕೆ.ಟಿ.ತಾಂಡೇಲ್, ದೇವಳವೆಕ್ಕಿ ಗ್ರಾಂ ಪಂಚಾಯತ ಅಧ್ಯಕ್ಷ ದೇವಿದಾಸ ಬೇಳೂರಕರ, ರವಿ ಅಮದಳ್ಳಿ, ಪ್ರಾಕಿ ಡಿಸೋಜ್, ಸಮ್.ಸನ್.ಡಿಸೋಜ, ರಶಿದ ಖಾನ್ ಹಾಗೂ ಇನ್ನಿತರರು ಇದ್ದರು.