Home Article ಸ್ನೇಹ ಅದು ಅನನ್ಯವಾದ ಬಂಧ

ಸ್ನೇಹ ಅದು ಅನನ್ಯವಾದ ಬಂಧ

SHARE
ಅವರೂ ನಮ್ಮ ಗೆಳೆಯರೇ...

 

ಆತ್ಮೀಯರೇ… ಸ್ನೇಹ ಅದು ಅನನ್ಯವಾದ ಬಂಧ. ತನ್ನೊಳಗಿನ ಎಲ್ಲ ಭಾವನೆಗಳನ್ನೂ ತಡೆಯಿಲ್ಲದಂತೆ ಅಭಿವ್ಯಕ್ತಿಸುವ ಆ ಸ್ನೇಹ ಸಂಬಂಧಕ್ಕೆ ಯಾವುದುತಾನೇ ಸರಿಸಾಟಿ ಅಲ್ಲವೇ? ಹೌದು ನಿಜವಾಗಿಯೂ ಸ್ನೇಹ ಸಂಬಂಧ ಅದು ಅವಿನಾಶಿಯಾದುದು. ತನ್ನದೆಲ್ಲವನ್ನೂ ಹೇಳಿಕೊಳ್ಳುವ ಮನಬರುವುದು ಸ್ನೇಹಿತರಿಗೆ ಮಾತ್ರ. ಈ ನಿಟ್ಟಿನಲ್ಲಿ ಚಿಂತನೆಗಳನ್ನು ಹರಿಸಿದಾಗ ಮಕ್ಕಳು – ಶಿಕ್ಷಕರ ನಡುವಿನ ಹಾಗೂ ಮಗು – ಪಾಲಕರ ನಡುವಿನ ಸಂಬಂಧ ಸ್ನೇಹದ ನೆಲೆಯಲ್ಲಿ ಏಕೆ ಬೆಳೆಯಬಾರದು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮನೆಯಲ್ಲಿ ಪಾಲಕರು ಹಾಗೂ ಶಾಲೆಯಲ್ಲಿ ಶಿಕ್ಷಕರೇ ಆ ಮಗುವಿಗೆ ಪಾಲಕರು. ಆದರೆ ಮಗುವಿಗೆ ಶಿಕ್ಷಕ ಸ್ನೇಹಿತ ಎಂದು ಅನ್ನಿಸಿದಾಗ ಮಾತ್ರ ಮಗುವಿನ ಆಂತರ್ಯ ಶಿಕ್ಷಕನ ಸಮ್ಮುಖದಲ್ಲಿ ಬಿತ್ತರಗೊಳ್ಳುವುದು. ಪಾಲಕರೂ ಮಗುವಿನ ಪಾಲಿಗೆ ಸ್ನೇಹಿತರಾದರೆ ಮಗುವಿ ಆಂತರ್ಯ ಅರಿಯುವುದು ಸುಲಭ ಎಂಬುದನ್ನು ಗುರ್ತಿಸಿ ಕೆಲವು ಅಂಶಗಳನ್ನು ಇಲ್ಲಿ ಹೊಂದಿಸಿದೆ.

ಮಗುವನ್ನೂ ಸ್ನೇಹಿತರಂತೆ ಕಾಣುವ ಪ್ರಯತ್ನ ಶಿಕ್ಷಕರಿಂದ ಆಗಬೇಕು ಎಂಬುದು ಸತ್ಯ. ಆದರೆ ಮಗುವಿಗೆ ಶಿಕ್ಷಕ ಸ್ನೇಹಿತನಾದರೆ ಆ ಮಗು ಶಿಕ್ಷಕರ ಮೇಲೆ ಗುರು ಭಾವನೆ ಹೊಂದಲು ಹೇಗೆ ಸಾಧ್ಯ ಎಂಬುದು ನಮ್ಮೆಲ್ಲರ ಪ್ರಶ್ನೆಯಾಗಬಹುದು? ಆದರೆ ಒಂದಂಶ ನೆನಪಿನಲ್ಲಿರಬೇಕು ಮಗುವಿಗೆ ಶಿಕ್ಷಕ ಹತ್ತಿರವಾದಾದಾಗ ಮಾತ್ರ ಶಿಕ್ಷಕನೇ ಮಗುವಿಗೆ ಆದಶರ್Àನಾಗುತ್ತಾನೆ. ಹಾಗಾದರೆ ಮಗುವಿನ ಜೊತೆಗೆ ಹೆಚ್ಚಿಗೆ ಬೆರೆಯಲು ಪ್ರಯತ್ನ ಮಾಡಬಹುದಲ್ಲ. ಆ ನಿಟ್ಟಿನಲ್ಲಿ ಕೆಲವು ಅಂಶಗಳನ್ನು ಚಿಂತಿಸೋಣ

ಮಕ್ಕಳೊಂದಿಗೆ ಸ್ನೇಹ ಬೆಳೆಸಲು ಹೀಗೆ ಮಾಡಿ
 ಶಿಕ್ಕಕರು ಮಕ್ಕಳ ಜೊತೆಗೆ ಮಾತಾಡುವಾಗ ನಗುಮೊಗ ಇರಲಿ. ನಿಮ್ಮ ಮುಖದ ಬಾವನೆಯೇ ಮಗುವನ್ನು ನಿಮ್ಮ ಹತ್ತಿರಕ್ಕೆ ಕರೆತರುವುದು.
 ಮಾತಾಡುವ ಮೊದಲು ಕೈ ಕುಲುಕುವುದು ಅಥವಾ ತಲೆಯ ಮೇಲೆ ಕೈ ಸವರುವುದು ಒಳ್ಳೆಯದು ಇದರಿಂದ ಮಗುವಿಗೆ ಇವರು ನಮ್ಮವರು ಎಂಬ ಭಾವನೆ ಬರುತ್ತದೆ ಎನ್ನುತ್ತದೆ ಮನಃಶಾಸ್ರ.
 ಮಗುವಿನ ದೃಷ್ಟಿಯನ್ನು ಗಮನಿಸಿ ನಿಮ್ಮ ಮಾತುಗಳು ಸಾಗಲಿ .ಪ್ರತೀ ವಿಷಯಗಳನ್ನೂ ಅವರ ಭಾವನೆಗೆ ಸ್ಪಂದಿಸುವಂತೆ ಮುಂದುವರಿಸಿ.
 ಮಗುವಿನ ಒಳ್ಳೆಯ ಗುಣಗಳನ್ನು ಮೊದಲು ಹೇಳಿ,ತಪ್ಪುಗಳ ಚರ್ಚೆಗೆ ಮಗುವಿಗೂ ಅವಕಾಶ ಕೊಡಿ.
 ಒಮ್ಮೆ ಯಾವುದೋ ವಿಷಯಕ್ಕೆ ಶಿಕ್ಷಷಕರು ಕೂಗುವುದು ಸರ್ವೇ ಸಾಮಾನ್ಯ. ಅದಾದ ನಂತರ ಮಗುವನ್ನು ಒಮ್ಮೆ ನಿಧಾನಕ್ಕೆ ಮಾತಾಡಿಸಿ ಅದರ ತಪ್ಪಿನ ಅರಿವು ಮಾಡಿಸಿ.
 ತೀರಾ ಹತ್ತಿರದ ವಿಚಾರಗಳು,ಮಗುವಿನ ಮನೆ,ಆರೋಗ್ಯ,ಆಟ,ಪಾಠದ ಕುರಿತಾಗಿಯೂ ಮಾತುಗಳು ಬರಲಿ ಅವು ಮಗುವನ್ನು ಶಿಕ್ಕಕರ ಜೊತೆಗೆ ಹೊಂದಿಕೊಳ್ಳಲು ಅವಕಾಶ ಕಲ್ಪಿಸುವ ಪ್ರಸಂಗಗಳಾಗಿವೆ.
 ತಪ್ಪು ಮಾಡಿದ ಮಗುವಿಗೆ ಅಗತ್ಯ ಇರುವಷ್ಟು ಬುದ್ದಿಹೇಳಿ,ಅಗತ್ಯವಿದ್ದಷ್ಟು ಸಮರ್ಪಕ ಎನಿಸಿದ (ಮಾರಕವಲ್ಲದ) ಶಿಕ್ಷೆ ಕೊಡಿ ಆದರೆ ನಂತರದಲ್ಲಿ ಆ ಮಗುವಿಗೆ ಸಾಂತ್ವಾನ ಹೇಳಿ.
 ಮಗುವಿಗೂ ಅವರದೇ ಅಭಿಪ್ರಾಯಗಳಿವೆ ಅವುಗಳಿಗೂ ಅವಕಾಶ ಕೊಡಿ.
ಇವೆಲ್ಲವೂ ಶಿಕ್ಷಕ ಹಾಗೂ ವಿದ್ಯಾರ್ಥಿಗಳನ್ನು ಸ್ನೇಹಿತರಾಗಿಸುವ ಅಂಶಗಳು. ಗೆಳೆತನದ ಮೂಲಕ ಶಿಕ್ಷಣ ಹೋದಾಗ ಮುಂದಿನ ಸಮಾಜ ಸ್ನೇಹಮಯ ವಾತಾವರಣದಲ್ಲಿ ನಡೆಯುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ನಾವೂ ಕೊಂಚ ಪ್ರಯತ್ನ ಮಾಡೋಣವೇ?

ಮನೆಯಲ್ಲಿ ಬಹುಕಾಲ ಕಳೆಯುವ ಮಗು ಪಾಲಕರನ್ನು ಗೌರವಿಸುವ ಜೊತೆಗೆ ಅವರ ಜೊತೆ ಮುಕ್ತವಾಗಿ ವ್ಯವಹರಿಸುವ ಮನಸ್ಥಿತಿ ಹೊಂದಿದಾಗ ಮಾತ್ರ ಮಗುವಿಗೆ ಯಶಸ್ಸು ಹಾಗೂ ಪಾಲಕರಿಗೂ ನೆಮ್ಮದಿ ಸಿಗುತ್ತದೆ. ಹಾಗಾದರೆ ಮಗುವನ್ನು ಸ್ನೇಹಿತನಂತೆ ಕಾಣಲು ಪಾಲಕರು ಏನು ಮಾಡಬಹುದೆಂಬುದನ್ನು ಕೊಂಚ ಯೋಚಿಸಿ.

ಪಾಲಕರೇ ಮಗುವಿನೊಂದಿಗೆ ಸ್ನೇಹಿತರಾಗಲು ಹೀಗೆ ಮಾಡಿ.
 ನೀವು ಎಷ್ಟೇ ಬ್ಯೂಸಿ ಇದ್ದರೂ ಮನೆಗೆ/ಮಗುವಿಗೆ ಸ್ವಲ್ಪ ಸಮಯಕೊಡಿ.
 ಮಗುವನ್ನು ಹತ್ತಿರ ಕರೆದು ಮುದ್ದಿಸಿ, ಸಾದ್ಯವಾದಷ್ಟು ಅವರ ಜೊತೆಗೆ ಸಮಯ ಕಳೆಯಿರಿ.
 ಮಗುವಿನ ಶಾಲೆಯ ಕಲಿಕೆ, ಗೆಳೆಯರ ಜೊತೆಗಿನ ಸುಖ ದುಖಃದ ಸಮಯದ ಬಗ್ಗೆ ವಿಚಾರಿಸಿ.
 ಕಲಿಕೆಯಲ್ಲಿ ಮನೆಗೆಲಸದಲ್ಲಿ ಮಗುವಿಗೆ ಸ್ವಲ್ಪ ಸಹಾಯಮಾಡಿ.
 ಕ್ರಿಯಾತ್ಮಕ ವಿಷಯಗಳು, ನಿಮ್ಮ ಬಾಲ್ಯದ ಸುಖ ದುಖಃಗಳನ್ನು ಹಾಗೂ ಹಾಸ್ಯಗಳನ್ನು ಮಗುವಿನ ಜೊತೆಗೆ ಹಂಚಿಕೊಳ್ಳಿ.
 ನಿಮ್ಮ ಕೆಲಸದಲ್ಲಿ ಮಗುವಿನ ಸಹಾಯ ಪಡೆಯಿರಿ.
 ಮಗುವನ್ನು ಹೊರಗಿನ ಸ್ಥಳಗಳಿಗೆ ಕರೆದೊಯ್ಯಿರಿ.ಮಗುವಿನ ಸ್ನೇಹಿತರಿಂದಲೂ ಮಗುವಿನ ಬಗ್ಗೆ ತಿಳಿಯಿರಿ ಮತ್ತು ಉತ್ತಮ ಗುಣಗಳ ಬಗ್ಗೆ ಮಗುವಿನ ಜೊತೆ ಹಂಚಿಕೊಳ್ಳಿ.

ಈ ಅಂಶಗಳು ನಮಗೆಲ್ಲ ತಿಳಿದ ವಿಷಯವೇ ಆದರೂ ಇವುಗಳ ಬಗ್ಗೆ ನಮ್ಮ ಯೋಚನೆ ಹರಿಯಬೇಕು. ಮಕ್ಕಳನ್ನು ಪ್ರೀತಿಸುವ ಹಾಗೂ ಸ್ನೇಹಿತರಾಗಿ ಅವರ ಮನಸ್ಸನ್ನು ಅರಿಯುವ ಹೊಸ ಪ್ರಯತ್ನ ಸಾಗಬೇಕಾಗಿದೆ. ಎಲ್ಲವನ್ನೂ ಹಂಚಿಕೊಂಡು ಹೊಸದಾರಿ ತೋರಿಸುವ ಪ್ರಯತ್ನಗಳು ಸಾಗಲಿ ಎಂಬುದೇ ಈ ಲೇಖನದ ಆಶಯ.

ಮಕ್ಕಳಿಗೂ ನಮ್ಮ ಸ್ನೇಹಿತರ ಸ್ಥಾನ ಸಿಗಲಿ. ಸ್ನೇಹಿತರೂ ಬದುಕಿನಲ್ಲಿ ನಮ್ಮ ಕುಟುಂಬದವರಂತೆಯೇ ಆಗಲಿ.