Home Important ಶ್ರೀ ರಾಮಚಂದ್ರಾಪುರ ಮಠದ ಭಕ್ತರ ನಂಬಿಕೆಯ ಬಗ್ಗೆ ಮಾತಾಡಿದ ದಿನೇಶ್ ಗುಂಡೂರಾವ್ ರವರಿಗೊಂದು ಬಹಿರಂಗ...

ಶ್ರೀ ರಾಮಚಂದ್ರಾಪುರ ಮಠದ ಭಕ್ತರ ನಂಬಿಕೆಯ ಬಗ್ಗೆ ಮಾತಾಡಿದ ದಿನೇಶ್ ಗುಂಡೂರಾವ್ ರವರಿಗೊಂದು ಬಹಿರಂಗ ಪತ್ರ

SHARE

ಕರ್ನಾಟಕ ರಾಜ್ಯದ ಗೌರವಾನ್ವಿತ ಶಾಸಕರೂ , ಮಾಜಿ ಸಚಿವರೂ , ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಕಾರ್ಯಧ್ಯಕ್ಷರೂ ಆಗಿರುವ ಶ್ರೀ ದಿನೇಶ್ ಗುಂಡೂರಾವ್ ರವರಿಗೊಂದು ಬಹಿರಂಗ ಪತ್ರ

“ಒಬ್ಬ ಬ್ರಾಹ್ಮಣ ಸಮಾಜದ ಹಿನ್ನೆಲೆಯಿಂದ ಬಂದವನಾದರೂ ಕೂಡ , ನಾನು ಇವತ್ತು ಅಂಬೇಡ್ಕರ್ ರವರ ಪ್ರತಿಮೆ ಅನಾವರಣ ಮಾಡುತ್ತಿದ್ದೇವೆ . ಇದೇ ರೀತಿ ಹಿಂದುಳಿದ ವರ್ಗದ ಹಿನ್ನೆಲೆಯಿಂದ ಬಂದ ಒಬ್ಬ ಮುಖ್ಯಮಂತ್ರಿ ಮೊದಲು ಮಾಡಬೇಕಾದ ಕೆಲಸ ಆದಿ ಶಂಕರಾಚಾರ್ಯರ ಪ್ರತಿಮೆ ಇದೇ ವಿಧಾನಸೌಧದ ಎದುರುಪ್ರತಿಷ್ಠಾಪನೆ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು”

ಈ ಮಾತು ಸಾರ್ವಜನಿಕವಾಗಿ ಹೇಳಿದ್ದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ , ಕರ್ನಾಟಕ ಕಂಡ ಧೀಮಂತ ನಾಯಕ ತಮ್ಮ ತಂದೆ ಶ್ರೀ ಗುಂಡೂರಾವ್ ರವರು . , . ಮಾತ್ರವಲ್ಲ ಅವರೇ ಶ್ರೀ ದೇವರಾಜ ಅರಸು ಸರ್ಕಾರದಲ್ಲಿ , ಗಿರಿನಗರ ನಿರ್ಮಾಣ ಮಾಡಲು ಇದ್ದ ಆಡಳಿತಾತ್ಮಕ ತೊಡಕು ಗಳನ್ನು ಪಟ್ಟು ಹಿಡಿದು ಸರಿ ಮಾಡಿದ್ದರೆ ಅದಕ್ಕೆ ಕಾರಣ ಶ್ರೀ ರಾಮಚಂದ್ರಾಪುರ ಮಠ ಅಧಿಕೃತಶಾಖಾ ಮಠ ಗಿರಿನಗರದಲ್ಲಿ ಇರಲು ಇದು ಕಾರಣ ಆಗಬಹುದು ಎಂಬುದು ಮತ್ತು ಅದು ಶ್ರೀ ಪೀಠದ ಪ್ರಸ್ತುತ ಗುರುಗಳ ಪೂರ್ವಾಚಾರ್ಯರಾದ ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳವರ ಆಶಯ ಎಂಬುದು ಮುಖ್ಯ ಕಾರಣಗಳಲ್ಲಿ ಒಂದು

ಇದು ಶ್ರೀ ಗುಂಡೂರಾವ್ ವರಿಗೆ ಶ್ರೀ ಶಂಕರ ಪೀಠಗಳು ಹಾಗೂ ಶ್ರೀ ರಾಮಚಂದ್ರಾಪುರ ಮಠದ ಬಗೆಗೆ ಇದ್ದ ಅಪಾರ ಗೌರವ ಹಾಗೂ ಭಕ್ತಿ ಗೆ ಚಿಕ್ಕ ಉದಾಹರಣೆಗಳು . ಅದಾದ ಮೇಲೆ ಶರಾವತಿಯಲ್ಲಿ ಸಾಕಷ್ಟು ನೀರು ಹರಿದಿದೆ . ಶಂಕರರಿಂದ ಸ್ಥಾಪಿತವಾದ ಅವಿಚ್ಚಿನ್ನ ಪರಂಪರೆ ಉಳ್ಳ ಶ್ರೀ ಮಠ ಧಾರ್ಮಿಕವಾಗಿ ಮಾತ್ರವಲ್ಲದೆ , ಸಾಮಾಜಿಕವಾಗಿ ಎಲ್ಲಾ ಪಕ್ಷ ಜಾತಿ ಜನಾಂಗ ಮೀರಿ ಸಮಾಜಕ್ಕೆ ,ಬಹು ದೊಡ್ಡ ಹತ್ತಾರು ಕೊಡುಗೆಗಳನ್ನು ಕೊಡ ಮಾಡಿದೆ ಅವುಗಳನ್ನು ಸಮಾಜ ಕೂಡ ಅತ್ಯಂತ ದೊಡ್ಡ ಮಟ್ಟದಲ್ಲಿ ಗೌರವಿಸಿದೆ . ಆದರೆ ಅವುಗಳು ತಮ್ಮ ವಿವಾದಾತ್ಮಕ ಟ್ವೀಟ್ ಹಾಗೂ ಈ ಪತ್ರದ ಮುಖ್ಯ ಉದ್ದೇಶವಲ್ಲ
ತಾವು ಹರಿಯಾಣ ದಲ್ಲಿ ಸ್ವಘೋಷಿತ ಧರ್ಮ ಗುರುವೊಬ್ಬರನ್ನು , ಪ್ರಕರಣವೊಂದರಲ್ಲಿ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರಗಳನ್ನು ಖಂಡಿಸಿ ತಾವು ಮಾಡಿದ ವಿವಾದಾತ್ಮಕ ಟ್ವೀಟ್ ನಲ್ಲಿ , ಶ್ರೀ ರಾಮಚಂದ್ರಾಪುರ ಮಠವನ್ನು ಎಳೆದು ತಂದಿದ್ದಕ್ಕೆ ಎರಡು ಮುಖ್ಯ ವಿಷಯಗಳಿಗೆ ಶ್ರೀರಾಮಚಂದ್ರಾಪುರ ಮಠದ ಲಕ್ಷಾಂತರ ಭಕ್ತರು ಮತ್ತು ಅಭಿಮಾನಿಗಳ ಅಸಮ್ಮತಿ / ಆಕ್ಷೇಪ ಇದೆ ಮತ್ತು ಅವುಗಳು ನಮ್ಮ ಭಾವನೆಗಳನ್ನು ನೇರವಾಗಿ ಬಹುವಾಗಿ ನೋಯಿಸಿವೆ

ಮೊದಲನೆಯದಾಗಿ , ಆ ತೀರ್ಪು ಘೋಷಿಸಿದ್ದು , ಆ ಸ್ವಘೋಷಿತ ಮಾನವನನ್ನು ಅಪರಾಧಿ ಎಂದು ಘೋಷಿಸಿ – ಸ್ವಾಮೀ , ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀಗಳ ಮೇಲೆ ಹತ್ತಾರು (ಸುಳ್ಳು) ಪ್ರಕರಣಗಳನ್ನು ಧಾಖಲಾದವು .. ಇವತ್ತಿನ ವರೆಗೆ ಯಾವುದೇ ಪ್ರಕರಣದಲ್ಲಿ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀಗಳನ್ನು ‘ಅಪರಾಧಿ’ ಎಂದು ಘೋಷಿಸಿಲ್ಲ . ಹೀಗಿರುವಾಗ ಅಪರಾಧಿ ಎಂದು ಘೋಷಿಸಿದ ಪ್ರಕರಣವೊಂದಕ್ಕೆ ಶ್ರೀ ರಾಮಚಂದ್ರಾಪುರ ಮಠವನ್ನು ಎಳೆದಿರುವುದು ಎಷ್ಟರ ಮಟ್ಟಿಗೆ ಸರಿ .ಇದು ಭಕ್ತರ ಭಾವನೆ ಅಲ್ಲ , ಒಬ್ಬ ಸಂವಿಧಾನಿಕ ವ್ಯಕ್ತಿ ಯಾಗಿ , ಸಂವಿಧಾನದ ರೀತ್ಯಾ ಸ್ಥಾಪಿತ ನ್ಯಾಯಾಲಯಗಳ ತೀರ್ಪು ಕೂಡ ತಮ್ಮ ಗೌರವಕ್ಕೆ ಹಾಗೂಗಮನಕ್ಕೆ ಪಾತ್ರವಾಗುವುದಿಲ್ಲವೇ ???

ಎರಡನೆಯದಾಗಿ , ಆ ತೀರ್ಪು ಘೋಷಿಸಿದ ನಂತರ ನಡೆದ ಹಿಂಸಾಚಾರಗಳ ಕುರಿತಾಗಿ .. ನಮ್ಮೆಲರಿಗೂ ಗೊತ್ತಿರುವಂತೆ , ಶ್ರೀ ರಾಮಚಂದ್ರಾಪುರ ಮಠಕ್ಕೆ ಸಿಕ್ಕ ನ್ಯಾಯ ಸುಮ್ಮನೆ ಬಂದಿದ್ದಲ್ಲ – ಶ್ರೀ ಮಠದ / ಶ್ರೀ ಸಂಸ್ಥಾನದ ವಿರುದ್ಧ ಸಾಕಷ್ಟು ಕಾರಸ್ಥಾನಗಳು ನಡೆದವು – ಇದಕ್ಕೆ ಕಾರ್ಯಂಗದ ವ್ಯಕ್ತಿಗಳನ್ನು ಉಪಯೋಗಿಸುವಪ್ರಯತ್ನಗಳು ನಡೆದವು – ತನ್ಮೂಲಕ ಕೆಲವು ಅಧಿಕಾರಿಗಳಿಂದ ನ್ಯಾಯ ವಿರೋಧಿ ತೀರ್ಮಾನಗಳು , ಶ್ರೀ ಮಠದ / ಶ್ರೀ ಸಂಸ್ಥಾನದ ವಿರುದ್ಧ ನಡೆದವು

ತಮಗೆ ಗೊತ್ತಿರಲಿ – ಇಂತಹ ಪ್ರತಿಕೂಲ ಸಂದರ್ಭದಲ್ಲೂ , ನೇರಾನೇರ ಅನ್ಯಾಯ ಆದ ಸಂದರ್ಭದಲ್ಲಿಯೂ ಕೂಡ ಶ್ರೀ ಮಠ ಮತ್ತು ಶ್ರೀ ಮಠದ ಭಕ್ತರು / ಅಭಿಮಾನಿಗಳು ಕಾನೂನನ್ನು ಕೈಗೆ ತೆಗೆದು ಕೊಂಡ ಉದಾಹರಣೆ ಇಲ್ಲ .. ಕೆಲವು ವ್ಯಕ್ತಿಗಳು ಸರ್ಕಾರದ ಕೆಲವು ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಶ್ರೀ ಮಠವನ್ನೇ ನುಂಗುವಪ್ರಯತ್ನ ಮಾಡಿದಾಗ , ಶ್ರೀ ಮಠದ ಭಕ್ತರಿಗೆ ಶ್ರೀಗಳು ಕರೆ ಕೊಟ್ಟಿದ್ದು ಕೇವಲ ಮೌನ ಉಪವಾಸ ಮಾಡಲು – ಹತ್ತಾರು ಸಹಸ್ರ ಜನ ಸೇರಿದ್ದ ಆ ಪ್ರತಿಭಟನೆಯಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆದಿರಲಿಲ್ಲ – ಅಹಿತಕರ ಘಟನೆ ಬಿಡಿ – ಒಂದೇ ಒಂದು ವಿರೋಧಿ ಘೋಷಣೆ ಕೂಡ ಮಾಡಿರಲಿಲ್ಲ ..

ಇದು , ಇದು ಶ್ರೀ ಮಠಕ್ಕೆ, ಶ್ರೀಗಳಿಗೆ ಮತ್ತು ಭಕ್ತರಿಗೆ ಈ ನೆಲದ ಕಾನೂನಿನ ಮೇಲೆ ಸಂವಿಧಾನದ ಮೇಲೆ ಇರುವ ಗೌರವ .. ಒಬ್ಬ ಜನ ಸಾಮಾನ್ಯನಾಗಿ ಅದನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ ..

ಹೀಗಿರುವಾಗ , ಇಂತಹ ಒಂದು ಮಠವನ್ನು , ಸಂಭಂದವೇ ಇಲ್ಲದ ಘಟನೆಯೊಂದಕ್ಕೆ ಸೇರಿಸಿ , ಶ್ರೀ ಮಠದ , ಶ್ರೀ ಗುರುಗಳ ಹಾಗೂ ಲಕ್ಷಾಂತರ ಭಕ್ತರ ಭಾವನೆಗಳಿಗೆ ನೋವು ಮಾಡಿರುವುದು ಅನಪೇಕ್ಷಣೀಯ ..

ವಿಶೇಷವಾಗಿ ತಮ್ಮ ಹಿನ್ನೆಲೆ ಹಾಗೂ ಮುಂದೆ ತಾವು ಏರಬೇಕಿರುವ ಸ್ಥಾನವನ್ನು ಗಮನಿಸಿದರೆ , ತಮ್ಮಿಂದ ಇಂತಹಹೇಳಿಕೆ ನಾವು ನಿರೀಕ್ಷಿರಲಿಲ್ಲ . ಈ ಮಾತನ್ನು ಒಬ್ಬ ಶ್ರೀ ಮಠದ ಅಭಿಮಾನಿಯಾಗಿ ಹೇಳುತ್ತಿಲ್ಲ . ಬದಲಾಗಿ , ಹತ್ತಾರು ವರ್ಷಗಳಿಂದ ದಿನೇಶ್ ಗುಂಡೂರಾವ್ ರವರ ಯಶಸ್ಸಿಗೆ ಹಾರೈಸಿ, ಅದಕ್ಕೆ ಕೆಲಸವನ್ನೂ ಮಾಡಿದ ಒಬ್ಬ ವ್ಯಕ್ತಿಯಾಗಿ , ತಮ್ಮ ತಂದೆಯವರು ಏರಿದ ಉನ್ನತ ಸ್ಥಾನ ಏರಲಿ ಎಂದು ಬಯಸುವ ವ್ಯಕ್ತಿಯಾಗಿಹೇಳುತ್ತಿದ್ದೇನೆ

ಅದೇನೇ ಇರಲಿ – ಆಗಿರುವ ತಪ್ಪನ್ನು , ತಿದ್ದಿ ಕೊಳ್ಳುವುದರ ಮೂಲಕ ತಾವು ದೊಡ್ಡವರಾಗುತ್ತೀರಿ ಹಾಗೂ ಲಕ್ಷಾಂತರ ಜನರ ಭಾವನೆಗಳಿಗೆ ಸ್ಪಂದಿಸುತ್ತೀರಿ ಎಂಬ ನಂಬಿಕೆಯೊಂದಿಗೆ ..

ನನ್ನ ಆ ನಂಬಿಕೆಯನ್ನೂ ಸುಳ್ಳು ಮಾಡಬೇಡಿ ! #BeliefAttacked

ನಮಸ್ಕಾರ
ಪ್ರಸನ್ನ ಎಂ ಮಾವಿನಕುಳಿ
9945134485 .ಇಂಜಿನಿಯರಿಂಗ್ ಮ್ಯಾನೇಜರ್ – ಸ್ಯಾಪ್ ಲ್ಯಾಬ್ಸ್ ಬೆಂಗಳುರು