Home Local ತೆನಾಲಿ ಮಹಾಪರೀಕ್ಷೆಯನ್ನು ಪೂರೈಸಿದ ಮಹೇಶ ಭಟ್ಟ

ತೆನಾಲಿ ಮಹಾಪರೀಕ್ಷೆಯನ್ನು ಪೂರೈಸಿದ ಮಹೇಶ ಭಟ್ಟ

SHARE

ಯಲ್ಲಾಪುರ: ಕಂಚಿಯಲ್ಲಿ ನಡೆದ ತೆನಾಲಿ ಮಹಾಪರೀಕ್ಷೆಯನ್ನು ತಾಲೂಕಿನ ಇಡಗುಂದಿಯ ಮಹೇಶ ಗಣಪತಿ ಭಟ್ಟ ಪೂರೈಸಿದ್ದಾರೆ.

ಶ್ರೀಮಾತಾ ಸಂಸ್ಕ್ರತ ಪಾಠಶಾಲೆಯಲ್ಲಿ ವ್ಯಾಕರಣ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದಲ್ಲಿ ಪಿಹೆಚ್.ಡಿ ಮಾಡುತ್ತಿದ್ದಾರೆ.
ಇವರು ಶ್ರೀಮಾತಾ ಸಂಸ್ಕ್ರತ ಪಾಠಶಾಲೆಯ ಪ್ರಾಂಶುಪಾಲ ರಾಮಚಂದ್ರ ಭಟ್ಟ ಮತ್ತು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವೆಂಕಟರಮಣ ಅವರ ಮಾರ್ಗದರ್ಶನ ಪಡೆದಿದ್ದರು.
ಏಳು ವರ್ಷಗಳ ಕಾಲ ನಡೆಯುವ 14 ಪರೀಕ್ಷೆಗಳನ್ನು ಎದುರಿಸಿ ಅ.26ರಂದು ಕೊನೆಯ ಮಹಾ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.