Home Health ಸಕ್ಕರೆ ಕಾಯಿಲೆ ಜೀವಿತಾವಧಿಯನ್ನು 9 ವರ್ಷ ಕಡಿಮೆ ಮಾಡುತ್ತದೆ: ಅಧ್ಯಯನ

ಸಕ್ಕರೆ ಕಾಯಿಲೆ ಜೀವಿತಾವಧಿಯನ್ನು 9 ವರ್ಷ ಕಡಿಮೆ ಮಾಡುತ್ತದೆ: ಅಧ್ಯಯನ

SHARE
ಬೀಜಿಂಗ್: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸರಾಸರಿ ಜೀವಿತದ ವಯಸ್ಸು 9 ವರ್ಷಗಳಷ್ಟು ಕಡಿಮೆಯಾಗುತ್ತದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾಗಿದ್ದು ಸರಿಯಾದ ಚಿಕಿತ್ಸೆ ನೀಡದಿರುವುದು ಇದಕ್ಕೆ ಕಾರಣ ಎಂದು ಚೀನಾದಲ್ಲಿ ನಡೆಸಿದ ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಅದರಿಂದ ಮರಣ ಪ್ರಮಾಣ  ಎಷ್ಟಾಗಿದೆ ಎಂಬುದು ತಿಳಿದುಬಂದಿಲ್ಲ.ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಚೀನಾದ ಪೆಕಿಂಗ್ ವಿಶ್ವವಿದ್ಯಾಲಯದ ಸಂಶೋಧಕರು 30ರಿಂದ 79 ವರ್ಷ ವಯಸ್ಸಿನ ಸಕ್ಕರೆ ಕಾಯಿಲೆಗೆ ತುತ್ತಾಗಿರುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಚೀನಾದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರನ್ನು 2004ರಿಂದ 2008ರವರೆಗೆ ಅಧ್ಯಯನಕ್ಕೊಳಪಡಿಸಲಾಗಿದ್ದು, 2014ರಲ್ಲಿ ಸಾವಿಗೆ ನಿಖರ ಕಾರಣಗಳೇನೆಂಬುದನ್ನು ತಿಳಿಯಲಾಯಿತು.
ಅಧ್ಯಯನದಿಂದ ತಿಳಿದುಬಂದ ಅಂಶವೆಂದರೆ ಡಯಾಬಿಟಿಸ್ ನಿಂದ ಬಳಲುತ್ತಿರುವ ಜನರು ಇತರರಿಗಿಂತ ಬೇಗ ಸಾಯುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿದೆ.ಡಯಾಬಿಟಿಸ್ ನಿಂದ ಹೃದಯ ಕಾಯಿಲೆ, ಪಾರ್ಶ್ವವಾಯು, ಕಿಡ್ನಿ ತೊಂದರೆ, ಕರುಳು ಸಮಸ್ಯೆ, ಸೋಂಕು, ಯಕೃತ್ತು, ಮೇದೋಜೀರಕ ಗ್ರಂಥಿ ಮತ್ತು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.
ಸಕ್ಕರೆ ಕಾಯಿಲೆ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಹೆಚ್ಚಿದ್ದರೂ ಕೂಡ ಅದರಿಂದುಂಟಾಗುವ ಆರೋಗ್ಯದ ಅಪಾಯಗಳು ಗ್ರಾಮೀಣ ಪ್ರದೇಶಗಳಲ್ಲಿ ಜಾಸ್ತಿಯಾಗಿರುತ್ತದೆ.
ಸಕ್ಕರೆ ಕಾಯಿಲೆಗೆ ಸರಿಯಾದ ಚಿಕಿತ್ಸೆ ಪಡೆಯದಿರುವುದರಿಂದ ಅದರಿಂದ ಇತರ ಕಾಯಿಲೆ ಬಂದು ಸಾಯುವವರ ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತ ನಾಲ್ಕು ಪಟ್ಟು ಜಾಸ್ತಿಯಾಗಿದೆ.