Home Important ಇಂದಿರಾ ಕ್ಯಾಂಟೀನ್ ಗುಣಮಟ್ಟದಲ್ಲಿ ಗ್ರೇಟ್ ಎಂದ ಸಿ.ಎಂ

ಇಂದಿರಾ ಕ್ಯಾಂಟೀನ್ ಗುಣಮಟ್ಟದಲ್ಲಿ ಗ್ರೇಟ್ ಎಂದ ಸಿ.ಎಂ

SHARE

ಮೈಸೂರು: ಇಂದಿರಾ ಕ್ಯಾಂಟೀನ್ ತಿಂಡಿ ಗುಣಮಟ್ಟವನ್ನು ಶ್ಲಾಘಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಲಿಗೆ, ಉಂಗುರ, ಚೈನು ಹಾಕೊಂಡಿರೋರೆಲ್ಲಾ ಬಂದು ತಿಂತಿದ್ದಾರೆ ಎಂದು ಹೇಳಿದ್ದಾರೆ. ಮೈಸೂರಿನ ಸುತ್ತೂರು ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಇತ್ತೀಚೆಗೆ ರಾಜ್ಯ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ನ ತಿಂಡಿ ಶುಚಿ, ರುಚಿಯಾಗಿರುವುದರಿಂದಲೇ ಸ್ಕೂಟರ್ ನಲ್ಲಿ ಬಂದು ತಿಂದು ಹೋಗ್ತಿದ್ದಾರೆ ಎಂದು ಬಣ್ಣಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ನ ಅಡುಗೆಗೆ ಎಣ್ಣೆ ಕಡಿಮೆ ಬಳಸಿ, ರುಚಿಯತ್ತ ಹೆಚ್ಚು ಗಮನಕೊಡಲಾಗುತ್ತಿದೆ. ಇದಕ್ಕಾಗಿಯೇ, ಕ್ಯಾಂಟೀನ್ ಮುಂದೆ ದಿನ ನಿತ್ಯ ದೊಡ್ಡ ಕ್ಯೂ ಇರುತ್ತದೆ ಎಂದು ಹೇಳಿ, ಅಲ್ಲಿನ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ.