Home Local ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ, ಸಂಸ್ಕೃತಿ ಅಗತ್ಯ: ಕೃಷ್ಣ ಭಟ್ಟ ನಾಯಕನಕೆರೆ

ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ, ಸಂಸ್ಕೃತಿ ಅಗತ್ಯ: ಕೃಷ್ಣ ಭಟ್ಟ ನಾಯಕನಕೆರೆ

SHARE

ಯಲ್ಲಾಪುರ: ಭಾರತೀಯ ಎಲ್ಲ ಭಾಷೆಗಳಿಗೂ ಸಾಹಿತ್ಯದ ಮೂಲಕ ಸಮನ್ವಯತೆ, ಪರಸ್ಪರ ಚರ್ಚೆ, ಚಿಂತನೆ ಮಾಡಿ ಸಾಹಿತ್ಯವನ್ನು ಗಟ್ಟಿಗೊಳಿಸುವ ನೆಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಹತ್ವದ ಪಾತ್ರವಹಿಸುತ್ತಿದೆ ಎಂದು ಯಲ್ಲಾಪುರ ಘಟಕದ ಸಹ ಸಂಚಾಲಕ ಮತ್ತು ಕವಿ ಕೃಷ್ಣ ಭಟ್ಟ ನಾಯಕನಕೆರೆ  ಹೇಳಿದರು.

ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಯಲ್ಲಾಪುರ ಸಹಯೋಗದಲ್ಲಿ ಹಮ್ಮಿಕೊಂಡ ಸಾಹಿತ್ಯಾಭಿರುಚಿ, ಸಂಸ್ಕಾರ ಹಾಗೂ ಸಂಸ್ಕೃತಿ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ, ಸಂಸ್ಕೃತಿ ಅಗತ್ಯ. ಅದಕ್ಕೆ ಸಾಹಿತ್ಯದ ಸ್ಪರ್ಶ ಆದಾಗ ಇನ್ನೂ ಹೆಚ್ಚಿನ ಪ್ರಬುದ್ಧತೆಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಗಳಲ್ಲಿಯೂ ಪ್ರತಿಭೆ ಅಡಗಿರುತ್ತದೆ. ಅದನ್ನು ನಾವು ಗಮನಿಸಿ ನಮ್ಮ ಕಣ್ಣು ಮುಂದೆ ಇರುವ ಪ್ರಕೃತಿ, ಪರಿಸರ, ವಾಸ್ತವಿಕ ಚಿತ್ರಣ, ಹತ್ತಾರೂ ಸನ್ನಿವೇಶಗಳನ್ನು ನಮ್ಮ ಮನಸ್ಸಿನ ಭಾವನೆಗಳ ಮೂಲಕ ಬರಹದಲ್ಲಿ ಮೂಡಿಸಿದಾಗ ಅದು ಕವಿತೆ ಅಥವಾ ಬರಹವಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಮುಖ್ಯ ವಕ್ತಾರರಾಗಿ ಯಕ್ಷಗಾನ ಅರ್ಥಧಾರಿ ಚಂದ್ರಕಲಾ ಭಟ್ಟ ಮಾತನಾಡಿ, ನಮ್ಮ ಬದುಕಿಗೆ ಋಷಿಮುನಿಗಳು ಒಂದು ಚೌಕಟ್ಟು ಹಾಕಿಕೊಟ್ಟಿದ್ದಾರೆ. ಪ್ರಾಚೀನ ಪರಂಪರೆಯಿಂದ ಬಂದ ಸಂಸ್ಕಾರ, ಸಂಸ್ಕøತಿ, ಜೀವನದ ಶಿಸ್ತು ನಮ್ಮ ಸಾಧನೆಗೆ ಕಾರಣ. ನಾವು ಮಾಡುವ ಕಾರ್ಯದಲ್ಲಿ ನಿಷ್ಠೆ, ಶ್ರದ್ದೆ ಹಾಗೂ ತಾಳ್ಮೆ ಬೆಳೆಸಿಕೊಂಡಾಗ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ರೂಪುಗೊಳ್ಳಬಹುದು ಮತ್ತು ಯಶಸ್ಸನ್ನುಗಳಿಸಬಹುದು ಎಂದ ಅವರು, ಇಂದು ವೇಶ ಭೂಷಣಗಳೇ ಮಹತ್ವ ಪಡೆಯುತ್ತಿದೆ. ನಮ್ಮ ಮಹಿಳೆಯರು ಅಸಯ್ಯ ಕಾಣದ ಸಭ್ಯತೆಯ  ಉಡುಗೆ-ತೊಡುಗೆಗಳನ್ನು ಧರಿಸಬೇಕು. ಭಾರತ ಕುಟುಂಬ ಪ್ರಧಾನ ದೇಶ. ಇಲ್ಲಿ ಭಾವನಾತ್ಮಕ ಸಂಬಂಧದಲ್ಲಿ ಬದುಕುತ್ತೇವೆ. ವ್ಯವಹಾರದ ಬದುಕು ಕಡಿಮೆ. ಪ್ರಪಂಚ ಹತ್ತಿರವಾದಂತೆ ನಾವು ಸಂಕುಚಿತರಾಗುತ್ತಿದ್ದೇವೆ. ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಬೆಳೆದು ಬಂದ ನಾವು, ಅದನ್ನು ದೂರಿಕರಿಸುತ್ತ ಸಾಗಿದ ಪರಿಣಾಮ ಮಾನಸಿಕ ಅಸ್ಥಿರತೆಗೆ ಒಳಗಾಗುತ್ತಿದ್ದೇವೆ. ಸಿದ್ದಪಡಿಸಿಟ್ಟ ಆಹಾರ ಸೇವನೆಯಿಂದ ಆರೋಗ್ಯಕ್ಕೆ ಮಾರಕ. ಹಳ್ಳಿಯ ಜೀವನದಲ್ಲಿ ಮಾತ್ರ ಹೆಚ್ಚು ಆರೋಗ್ಯದ ಮೌಲ್ಯದ ಜೀವನ ನಡೆಸುವುದಕ್ಕೆ ಸಾಧ್ಯ ಎಂದರು.
ಅ.ಭಾ.ಸಾ.ಪ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಹಳ್ಳಿಗಳು ವೃದ್ಧಾಧ್ರಮಗಳಾಗುತ್ತಿವೆ. ನಮ್ಮ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸಿದರೆ ನಮ್ಮ ಮಕ್ಕಳು ಕೂಡ ನಮ್ಮನ್ನು ಸಹ ವೃದ್ಧಾಶ್ರಮಕ್ಕೆ ತಳ್ಳುತ್ತಾರೆ. ಕುಟುಂಬ ವ್ಯವಸ್ಥೆಯಿಂದ ವಿಘಟನೆಯತ್ತ ಸಾಗುತ್ತಿರುವ ನಾವು, ಈ ಕುರಿತು ಗಂಭೀರ ಚಿಂತನೆ ನಡೆಸುವ ಅಗತ್ಯತೆಯಿದೆ ಎಂದರು.
ಕಾರ್ಯದರ್ಶಿ ಸಿ.ಎಸ್.ಚಂದ್ರಶೇಖರ ಮಾತನಾಡಿ, ಸಮಾಜದಿಂದ ಸಾಕಷ್ಟನ್ನು ಪಡೆಯುತ್ತಿದ್ದ ನಾವು, ಸಮಾಜಕ್ಕೆ ನಾವೇನು ಕೊಡುತ್ತಿದ್ದೇವೆ ಎಂದು ಆತ್ಮ ವಿಮರ್ಶನೆ ಮಾಡಿಕೊಳ್ಳಬೇಕು. ನಾವು ಅತಿಯಾದ ಸ್ವಾರ್ಥದತ್ತ ಸಾಗಿದರೆ ಅದರ ಕೆಟ್ಟ ಪರಿಣಾಮ ನಾವೇ ಎದುರಿಸಬೇಕಾಗುತ್ತದೆ ಎಂದರು.
ಸ.ಪ್ರ.ದ ಕಾಲೇಜು ಪ್ರಾಚಾರ್ಯೆ ಡಾ.ದಾಕ್ಷಾಯಣಿ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚದಲ್ಲಿ ಕೆಟ್ಟ ತಾಯಿ ಸಿಗುವುದು ದುರ್ಲಭ ಎಂಬ ಸತ್ಯವನ್ನು ನಾವು ಮೊದಲು ಅಥೈಯಿಸಿಕೊಳ್ಳಬೇಕು. ಪಾಲಕರು ಪ್ರತಿಫಲಾಪೇಕ್ಷೆಯಿಲ್ಲದೇ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಜೀವನವನ್ನು ಸೆವೆಸುತ್ತಾರೆ. ಅಂತವರನ್ನು ಎಂದೂ ಅಗೌರವಿಸದೇ, ಪ್ರೀತಿಯಿಂದ ಕಾಣಬೇಕು. ಅವರ ಋಣವನ್ನು ಒಂದು ಜನ್ಮದಲ್ಲಿ ತೀರಿಸಲಾಗದು ಎಂದರು.