Home Local ಡಾ.ಎ ವಿ ಬಾಳಿಗಾ ವಾಣಿಜ್ಯ ವಿದ್ಯಾಲಯದಲ್ಲಿ ಯೂನಿಯನ್ ಉದ್ಘಾಟನೆ.

ಡಾ.ಎ ವಿ ಬಾಳಿಗಾ ವಾಣಿಜ್ಯ ವಿದ್ಯಾಲಯದಲ್ಲಿ ಯೂನಿಯನ್ ಉದ್ಘಾಟನೆ.

SHARE

ಕುಮಟಾ: ಇಲ್ಲಿನ ಡಾ. ಎ ವಿ ಬಾಳಿಗಾ ವಾಣಿಜ್ಯ ವಿದ್ಯಾಲಯದಲ್ಲಿ ಯೂನಿಯನ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಕೆ ಟಿ ಭಟ್ (ಡಿ ಡಿ ಪಿ ಐ )ಕಾರವಾರ ,ಹಾಗು ಕೆನರಾ ಕಾಲೇಜು ಸೊಸೈಟಿ ಅಧ್ಯಕ್ಷ ಶ್ರೀ ಮುರಳೀಧರ್ ಪ್ರಭು, ಜಯರಾಮ್ ಭಟ್ ,ಪದವಿ ಪೂರ್ವ ಪ್ರಾಂಶುಪಾಲರಾದ ಶ್ರೀ ಎನ್. ಜಿ ಹೆಗ್ಡೆ ,ಪ್ರೊ ವೀಣಾ ಪೈ ,ಪ್ರೊ .ವೆಲನ್ಸಿಯ ಡಿಸೋಜಾ ,ಯೂನಿಯನ್ ಕಾರ್ಯದರ್ಶಿ ಹೆಚ್. ಪಿ ಶರತ್ , ಎನ್ ಎಸ್ ಎಸ್ ಕಾರ್ಯದರ್ಶಿ ಆದಿತ್ಯ ಶೇಟ್ , ಬಿ ಬಿ ಎ ಯೂನಿಯನ್ ಕಾರ್ಯದರ್ಶಿ ವಿಶಾಲ್ ಬಾಂದಿ ,ಪಿ ಯು ಯೂನಿಯನ್ ಕಾರ್ಯದರ್ಶಿ ಪ್ರಣವ್ ಪಂಡಿತ್ ಉಪಸ್ಥಿತರಿದ್ದರು .

ಕಾರ್ಯಕ್ರಮಕ್ಕೆ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ,ವಿದ್ಯಾರ್ಥಿ ಪ್ರತಿನಿಧಿಗಳು ,ಎನ್ ಎಸ್ ಎಸ್ ಸ್ವಯಂ ಸೇವಕರು ಹಾಜರಿದ್ದರು . ಸಿದ್ದಾರ್ಥ ಕುಮಟಾಕರ ಗಣೇಶ ಸ್ತುತಿ ಹಾಡಿದರು , ಹೆಚ್ ಪಿ ಶರತ್ ಸ್ವಾಗತಿಸಿದರು ,ಸ್ವಾತಿ ಮತ್ತು ಪ್ರಭಾ ನಿರೂಪಿಸಿದರು ,ಸಹನಾ ಹೆಗ್ಡೆ ವಂದಿಸಿದರು …

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾಸಿಲಾಯಿತು. ಶೇಕಡಾ ೮೫ % ಕ್ಕಿಂತ ಹೆಚ್ಚಿನ ಅಂಕಪಡೆದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.