Home Important ದೇವರ ಮುಂದೆ ಪ್ರಾರಂಭವಾಗಿದೆಯಾ ರಮಾನಾಥ ರೈ ಲಾಬಿ?

ದೇವರ ಮುಂದೆ ಪ್ರಾರಂಭವಾಗಿದೆಯಾ ರಮಾನಾಥ ರೈ ಲಾಬಿ?

SHARE

ಮಂಗಳೂರು: ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿರುವ ಗೃಹಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಕೊಡಿ ಎಂದು ಹೈಕಮಾಂಡ್ ತಿಳಿಸಿದೆ ಎನ್ನಲಾದ ಬೆನ್ನಲ್ಲೇ ರಮಾನಾಥ ರೈ ಪರ ಲಾಬಿ ಪ್ರಾರಂಭವಾಗಿದೆ. ಹಾಗಂತ ಇದು ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಲಾಬಿಯಲ್ಲ. ಬದಲಾಗಿ ದೇವರ ಮುಂದೆ ಪ್ರಾರಂಭವಾಗಿರುವ ಲಾಬಿಯಿದು.

ರಮಾನಾಥ ರೈ ಗೃಹ ಸಚಿವರಾಗಲಿ ಎಂದು ದೇವರ ಮೊರೆ ಹೋಗಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶಾಸಕ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ,ಧನಂಜಯ್ ಮಟ್ಟು ಸೇರಿದಂತೆ ಅನೇಕ ನಾಯಕರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.