Home Local ಅನಂತ ಕುಮಾರ್ ಗೆ ಒಲಿದ ಗದ್ದುಗೆ ಹೆಗಡೆಯಲ್ಲಿ ವಿಜಯೋತ್ಸವ

ಅನಂತ ಕುಮಾರ್ ಗೆ ಒಲಿದ ಗದ್ದುಗೆ ಹೆಗಡೆಯಲ್ಲಿ ವಿಜಯೋತ್ಸವ

SHARE

ಕುಮಟಾ : ಕೆನರಾ ಲೋಕಸಭಾ ಸದಸ್ಯ, ಕಟ್ಟಾ ಹಿಂದೂವಾದಿ ಅನಂತಕುಮಾರ್ ಹೆಗಡೆ ಯವರು ಇಂದು ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಶುಭ ಸಂದರ್ಭದಲ್ಲಿ ಕುಮಟಾದ ಹೆಗಡೆಯ ಬಿಜೆಪಿ ಕಾರ್ಯಕರ್ತರು ಅನಂತಕುಮಾರ್ ಹೆಗಡೆಯವರ ಮೂಲ ಗ್ರಾಮ ಹೆಗಡೆಯ ಗ್ರಾಮ ದೇವಿ ಶಾಂತಿಕಾಂಬೆಗೆ ಪೂಜೆ ಸಲ್ಲಿಸಿ ಪುಟಾಣಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

 

ಹಿರಿಯರಾದ ವಿನೋದ ಪ್ರಭು, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ನಾಗವೇಣಿ ಹೆಗಡೆ, ಪ್ರಕಾಶ್ ನಾಯ್ಕ, ಗಣೇಶ್ ಶೇಟ್, ಮಂಜು ನಾಯ್ಕ, ಲೋಹಿತ್ ಪಟಗಾರ, ರಾಘು ನಾಯ್ಕ, ಪ್ರಸನ್ನ ನಾಯ್ಕ ಹಾಗೂ 50 ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು