Home Important ಕಾಳಿ ನದಿಯಲ್ಲಿ ಕಯಾಕ್ ಫನ್

ಕಾಳಿ ನದಿಯಲ್ಲಿ ಕಯಾಕ್ ಫನ್

SHARE

ಕಾರವಾರ : ಇಲ್ಲಿನ ಕೋಡಿಬಾಗದ ಕಾಳಿ ನದಿ ತಟದಲ್ಲಿ ಸುಂದರವಾದ ಉದ್ಯಾನ ನಿರ್ಮಿಸಿರುವ ಮಂಗಳೂರಿನ ಲೀಸರ್‌ ಟೂರ್‍ಸ್‌ ಸಂಸ್ಥೆಯು ಇದೀಗ ಕಾಳಿ ನದಿಯಲ್ಲಿ ‘ಕಯಾಕ್‌ ಫನ್‌’ ಹಾಗೂ ‘ಕಯಾಕ್‌ ಫಿಶಿಂಗ್‌’ ಎಂಬ ವಿನೂತನ ಜಲ ಸಾಹಸ ಚಟುವಟಿಕೆಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಭಾನುವಾರ ಅಧಿಕೃತ ಚಾಲನೆ ನೀಡಿದರು.

ಗೋವಾದ ಕಡಲತೀರಗಳಲ್ಲಿ ಕಯಾಕ್‌ ಚಟುವಟಿಕೆ ಇದೆ. ಆದರೆ ರಾಜ್ಯದಲ್ಲಿ ಮಾತ್ರ ಇದು ಎಲ್ಲಿಯೂ ಇಲ್ಲ. ಹೀಗಾಗಿ ರಾಜ್ಯದ ಜಲ ಸಾಹಸಿಗರು ಹಾಗೂ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಕಾರವಾರದ ಕಾಳಿನದಿಯಲ್ಲಿ ಇದನ್ನು ಆರಂಭಿಸಲಾಗಿದೆ. ಈ ಚಟುವಟಿಕೆ ಪ್ರತಿ ಭಾನುವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಇರಲಿದೆ. ಆಸಕ್ತರು ಶನಿವಾರ ರಾತ್ರಿಯೇ ಕಾರವಾರಕ್ಕೆ ಬರಬೇಕಿದೆ.

ಜಲ ಸಾಹಸಿಗರನ್ನು ಬೆಳಿಗ್ಗೆ 6.30ಕ್ಕೆ ಕೋಡಿಬಾಗದ ಕಾಳಿ ರೀವರ್‌ ಗಾರ್ಡನ್‌ನಿಂದ ದೋಣಿಯಲ್ಲಿ 16 ಕಿ.ಮೀ. ದೂರದಲ್ಲಿರುವ ತಾಲ್ಲೂಕಿನ ಸಿದ್ಧರ ಗ್ರಾಮದ ನದಿ ತೀರಕ್ಕೆ ಬಿಡಲಾಯಿತು. ಅಲ್ಲಿಂದ ಅವರು ಕಯಾಕ್‌ ಮೇಲೆ ಕುಳಿತು ನದಿಯಲ್ಲಿ ವಿಹರಿಸುತ್ತ ಕೋಡಿಬಾಗದ ಗಾರ್ಡನ್‌ ಬಳಿ ನದಿತೀರವನ್ನು ತಲುಪಿದರು.

ಇದಕ್ಕೆ 3– 4 ತಾಸು ಹಿಡಿಯಿತು. ನದಿಯಂಚಿನ ಬೆಟ್ಟ ಗುಡ್ಡದ ಸೌಂದರ್ಯವ ನ್ನು ಸವಿಯುವ ಜತೆಗೆ ಹೊಸ ಅನುಭವ ತಂದುಕೊಟ್ಟಿತು. ಅಲ್ಲದೇ ಮಾರ್ಗಮಧ್ಯೆ ಸಿಗುವ ಎರಡು ನಡುಗಡ್ಡೆ ಹಾಗೂ ಕಾಂಡ್ಲಾ (ಮ್ಯಾಂಗ್ರೋ) ಗಿಡವನ್ನು ಪರಿಚಯಿಸುವುದರ ಜತೆಗೆ ನಡುಗಡ್ಡೆಯಲ್ಲಿ ತಿಂಡಿಯ ವ್ಯವಸ್ಥೆ ಕೂಡ ಮಾಡಲಾಯಿತು. ಇನ್ನು ಗಾರ್ಡನ್‌ ತಲುಪಿದ ನಂತರ ಮಧ್ಯಾಹ್ನ 1 ಗಂಟೆಗೆ ಕರಾವಳಿ ಶೈಲಿಯ ಊಟ ಕೂಡ ನೀಡಲಾಗುತ್ತದೆ.