Home Local ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರ ಹರ್ಷ: ಪಟಾಕಿ ಸಿಡಿಸಿ ಸಂಭ್ರಮ

ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರ ಹರ್ಷ: ಪಟಾಕಿ ಸಿಡಿಸಿ ಸಂಭ್ರಮ

SHARE

ಕೆನರಾ ಲೋಕಸಭಾ ಸದಸ್ಯರಾದ ಅನಂತ್ ಕುಮಾರ್ ಹೆಗಡೆ ಅವರು ಇಂದು ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಶುಭ ಸಂದರ್ಭದಲ್ಲಿ ಕುಮಟಾದ ಬಿಜೆಪಿ ಕಾರ್ಯಕರ್ತರ ಹರ್ಷ ಮುಗಿಲು ಮುಟ್ಟಿತ್ತು. ಇದೇ ಸಂದರ್ಭದಲ್ಲಿ ಕುಮಟಾದ ಗಿಬ್ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು .

ಇದೇ ಸಂದರ್ಭದಲ್ಲಿ ಮಾತನಾಡಿದ ಡಾಕ್ಟರ್ ಜಿ ಜಿ ಹೆಗಡೆ ಅವರು ನಮ್ಮೆಲ್ಲರ ಪ್ರೀತಿ ಪಾತ್ರರಾದ ಅನಂತಣ್ಣನಿಗೆ ಈ ಸ್ಥಾನ ದೊರೆತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .

ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಅವರು ಸತತ ಐದು ಬಾರಿ ಆಯ್ಕೆಯಾಗಿ. ಅಪ್ಪಟ ಹಿಂದೂ ವಾದಿಯಾಗಿ ದೇಶ ಸೇವೆ ಮಾಡುತ್ತಾ ಆಯ್ಕೆಯಾದ ಅನಂತ್ ಕುಮಾರ್ ಹೆಗಡೆಯವರಿಗೆ ಈ ಸ್ಥಾನ ದೊರೆತಿರುವುದು ಸಂತಸದ ವಿಷಯ ಎಂದರು …

ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಮಂಜುನಾಥ ಜನ್ನು ಮಾತನಾಡಿ ಅನಂತಕುಮಾರ್ ಹೆಗಡೆ ಅವರು ಮೋದಿ ಸಂಪುಟ ಸೇರಿದ ಸಂತಸವನ್ನು ಎಲ್ಲರೊಂದಿಗೆ ಹಂಚಿಕೊಂಡರು …

ಅಪ್ಪಟ ಹಿಂದುತ್ವವಾದಿ ಹಾಗೂ ರಾಜಕಾರಣಿ ಎನ್ನುವುದಕ್ಕಿಂತ ಅಪ್ರತಿಮ ದೇಶ ಭಕ್ತರಿಗೆ ಈ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ ಎಂದು ಸೂರಜ್ ನಾಯ್ಕ ಸೋನಿ ವಾಹಿನಿಯೊಂದಿಗೆ ಮಾತನಾಡಿದರು .

ಇದೇ ಸಂದರ್ಭದಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಹಾಜರಿದ್ದರು ಅಷ್ಟೇ ಅಲ್ಲದೆ ಎಲ್ಲರೂ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು .