Home Important ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಸೇರಿದ ಮುಸ್ಲಿಂ ಯುವಕ

ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಸೇರಿದ ಮುಸ್ಲಿಂ ಯುವಕ

SHARE

ಹುಬ್ಬಳ್ಳಿ ಮೂಲದ ವಿಜಯಲಕ್ಷ್ಮಿ ಮತ್ತು ಮುಸ್ತಾಕ್ ಇವರಿಬ್ಬರು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಮದುವೆ ಕೂಡ ಆಗಿದ್ದರು .ಹಿಂದೂ ಧರ್ಮದ ಬಗ್ಗೆ ಅಪಾರ ನಂಬಿಕೆ ಇರುವ ಮುಸ್ತಾಕ್ ಇಂದು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾನೆ. ಮುಸ್ತಾಕ್ ಇದೀಗ ಪ್ರತಾಪ್ ಆಗಿ ಬದಲಾಗಿದ್ದಾನೆ.

ಇದೇ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್ ನವದಂಪತಿಗಳಿಗೆ ಮುಂದೆ ಯಾವುದೇ ತೊಂದರೆಯಾಗದಂತೆ ಹಿಂದೂ ಸಮಾಜ ನೋಡಿಕೊಳ್ಳುತ್ತೆಂದು ಆಶ್ವಾಸನೆ ಕೊಟ್ಟಿದ್ದಾರೆ.