Home Local ರಕ್ಷಿತ ಗೋವಿಗೆ ಮಹಾಬಲೇಶ್ವರ ದೇವಾಲಯದ ವತಿಯಿಂದ ಹಸಿ ಮೇವು ಪೂರೈಕೆ.

ರಕ್ಷಿತ ಗೋವಿಗೆ ಮಹಾಬಲೇಶ್ವರ ದೇವಾಲಯದ ವತಿಯಿಂದ ಹಸಿ ಮೇವು ಪೂರೈಕೆ.

SHARE

ಆಂಧ್ರಪ್ರದೇಶದಿಂದ ಕಾಸರಗೋಡ ಕಸಾಯಿಖಾನೆಗೆ ಸಾಗಿಸುತ್ತಿದ್ದ 27 ಎತ್ತುಗಳನ್ನು ನಿನ್ನೆ ದಿ. 03-09-2017 ರಾತ್ರಿ ಹಿರೇಗುತ್ತಿಯಲ್ಲಿ ಆರಕ್ಷಕ ಇಲಾಖೆಯವರು ತಡೆಹಿಡಿದಿದ್ದರು. ಅವುಗಳನ್ನು ಗೋಕರ್ಣದ ಪೊಲೀಸ್ ಠಾಣೆಯ ಬಳಿ ಇಳಿಸಲಾಗಿತ್ತು.

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಪ್ರೇರಣೆಯಿಂದ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ಎತ್ತುಗಳಿಗೆ ಈ ದಿನ ಹಸಿ ಮೇವು ಪೂರೈಸಲಾಯಿತು.