Home Local ಬಾಲಾರೋಪಿಗಳ ಗೃಹದಿಂದ ಬಾಲಪರಾಧಿ ಎಸ್ಕೇಪ್

ಬಾಲಾರೋಪಿಗಳ ಗೃಹದಿಂದ ಬಾಲಪರಾಧಿ ಎಸ್ಕೇಪ್

SHARE

ಕಾರವಾರ:ಬಟ್ಟೆ ಒಣಗಿಸಲೆಂದು ತೆರಳಿದ್ದ ಬಾಲಪರಾಧಿಯೊಬ್ಬ ಜಿಲ್ಲಾ ಬಾಲಾರೋಪಿಗಳ ಗೃಹ (ರಿಮಾಂಡ್‌ ಹೋಂ) ದಿಂದ ಕಾಣೆಯಾಗಿದ್ದಾನೆ.

ಮುಂಡಗೋಡ ತಾಲ್ಲೂಕಿನ ಮಳಗಿಯ ನಿವಾಸಿ ಪರಶುರಾಮ್ ಆಲೂರ್ ತಪ್ಪಿಸಿಕೊಂಡಿರುವ ಬಾಲ ಅಪರಾಧಿ. ‘ಈತ ಬೆಳಿಗ್ಗೆ ಬಟ್ಟೆ ಒಣಗಿಸಲೆಂದು ಜಿಲ್ಲಾ ಬಾಲಾರೋಪಿಗಳ ಗೃಹದ ಅಂಗಳಕ್ಕೆ ತೆರಳಿದ್ದ. ಬಳಿಕ ಮರಳದೇ ಕಾಣೆಯಾಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಾಲಕನ ಹುಡುಕಾಟದಲ್ಲಿ ತೊಡಗಿದ್ದಾರೆ.