Home Local ಗುರುಗಳಿಗೆ ಗೌರವ ದೀಕ್ಷೆ: ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ.

ಗುರುಗಳಿಗೆ ಗೌರವ ದೀಕ್ಷೆ: ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ.

SHARE

ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳೆಲ್ಲ ಸೇರಿ ತಮಗೆ ಕಲಿಸುತ್ತಿರುವ ಗುರಸಮೂಹಕ್ಕೆ ವಿಶೇಷ ಗೌರವ ನೀಡಿ ಡಾ. ರಾಧಾಕೃಷ್ಣನ್ ಅವರ ಜನ್ಮ ದಿನಕ್ಕೆ ಮುನ್ನುಡಿ ಬರೆದರು. ಅವರೇ ಆಯೋಜಿಸಿದ ಕಾರ್ಯಕ್ರಮ ಅವರೇ ನಿರ್ವಹಿಸಿ ತನ್ಮೂಲಕ ಗುರುವೃಂದದ ಗಮನ ಸೆಳೆದರು. ಕುಮಾರಿ ಶ್ರೀಲಕ್ಷ್ಮೀ ಮತ್ತು ಸಂಗಡಿಗರು ಪ್ರಾರ್ಥಿಸಿ ಗುರುನಾಮ ಸ್ಮರಣೆಗೈದರು. ಕುಮಾರ ವಿಶ್ವಾಸ ಪೈ ಹಾಗೂ ಕುಮಾರಿಯರಾದ ರಕ್ಷಿತಾ ಪಟಗಾರ, ಕಾವ್ಯಾ ಪಟಗಾರ, ನುಸೈಬಾ ಬಾನು ರಾಧಾಕೃಷ್ಣನ್ ಅವರ ಜೀವನ ಸಾಧನೆಗಳ ಕುರಿತು ಸಿಂವಾವಲೋಕನ ಮಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ವಿ.ಎನ್.ಭಟ್ಟ, ಕಿರಣ ಪ್ರಭು, ನಯನಾ ನಾಯ್ಕ ಗುರುವಿನ ಮಹತ್ವದ ದೃಷ್ಟಾಂತಗಳನ್ನು ಉದಾಹರಿಸಿ ಮಾತನಾಡಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಮಾತನಾಡಿ ಐ ಹೇಟ್ ಯೂ ಟೀಚರ್ ಎಂಬ ಮನೋಭಾವ ಬದಲಾಗಿ ಐ ಲವ್ ಯೂ ಟೀಚರ್ ಎಂಬ ಭಾವ ಜಾಗೃತವಾಗಬೇಕು, ಅದಕ್ಕೆ ಸಮಾಜ ಕೂಡ ಶಿಕ್ಷಕರನ್ನು ಕೇವಲ ವ್ಯಾವಹಾರಿಕ ದೃಷ್ಠಿಯಿಂದ ನೋಡದೇ ಪ್ರೀತ್ಯಾದರಗಳನ್ನು ನೀಡಬೇಕೆಂದು ಅಭಿಪ್ರಾಯಪಟ್ಟರು. ಕುಮಾರಿ ಐಶ್ವರ್ಯಾ ಶಾನಭಾಗ ನಿರೂಪಿಸಿದರು. ಕುಮಾರ ಸುಮನ್ ಮಡಿವಾಳ ನಿರ್ವಹಿಸಿದರು. ಕುಮಾರ ಪ್ರಥಮ ಶೇಟ್ ವಂದಿಸಿದರು.