Home Local ಮಹಿಳೆಯರ ಏಕವಲಯ ವಾಲಿಬಾಲ್ ಪಂದ್ಯಾವಳಿ ಹಾಗೂ ಆಯ್ಕೆ ಹೊನ್ನಾವರದಲ್ಲಿ.

ಮಹಿಳೆಯರ ಏಕವಲಯ ವಾಲಿಬಾಲ್ ಪಂದ್ಯಾವಳಿ ಹಾಗೂ ಆಯ್ಕೆ ಹೊನ್ನಾವರದಲ್ಲಿ.

SHARE

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಮಹಿಳೆಯರ ಏಕವಲಯ ವಾಲಿಬಾಲ್ ಪಂದ್ಯಾವಳಿ ಹಾಗೂ ಆಯ್ಕೆ ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ(ಎಸ್.ಡಿ
ಎಮ್) ಕಾಲೇಜಿನಲ್ಲಿ ಸೆ.7 ಮತ್ತು ಸೆ.8 ರಂದು ಎರಡು ದಿನಗಳ ಕಾಲ ನಡೆಯಲಿದೆ ..ಸೆ.7 ರಂದು ಬೆಳಿಗ್ಗೆ 11.30 ಕ್ಕೆ ಬೆಳಕು ಟ್ರಸ್ಟ್ ನ ಶ್ರೀ ನಾಗರಾಜ ನಾಯಕ ಉದ್ಘಾಟನೆ ಮಾಡಲಿದ್ದಾರೆ .

ಎಂ.ಪಿ.ಇ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಅವರ ಉಪಸ್ಥಿತರಿರಲಿದ್ದಾರೆ.ಕವಿವಿ ಕ್ರೀಡಾ ವಿಭಾಗದ ಡಾ.ಎಂ.ಬಿ.ಪಾಟೀಲ್, ಉದ್ಯಮಿ ಸುನೀಲ್ ನಾಯ್ಕ ಹಾಗೂ ಎಂ.ಪಿ.ಇ ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಪ್ರಾಚಾರ್ಯ ಶ್ರೀ ಎಸ್.ಎಸ್.ಹೆಗಡೆ ಅಧ್ಯಕ್ಷತೆ ವಹಿಸುವರು .
ಸೆ.8 ರಂದು ಸಂಜೆ 3.30 ಕ್ಕೆ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಶಾಸಕರಾದ ಶ್ರೀ ಮಂಕಾಳ ಎಸ್. ವೈದ್ಯ ಹಾಗೂ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಶ್ರೀ ಕೃಷ್ಣ ಗೌಡ ಭಾಗವಹಿಸುವರು ಎಂದು ಪಂದ್ಯಾವಳಿಯ ಸಂಘಟನಾ ಕಾರ್ಯದರ್ಶಿ ಪ್ರೊ ಆರ್.ಕೆ.ಮೇಸ್ತ ತಿಳಿಸಿದ್ದಾರೆ …